ಮಕ್ಕಳಿಗಾಗಿ ಮಂಡಲಗಿರಿ ಪ್ರಸನ್ನ ಅವರು ಬರೆದ ಕವನ ಸಂಕಲನ-ಅಮ್ಮ ರೆಕ್ಕೆ ಹಚ್ಚು. ಕೃತಿಯ ಬೆನ್ನುಡಿಯಲ್ಲಿ ಮಕ್ಕಳ ಸಾಹಿತಿ ಡಾ. ಆನಂದ ಪಾಟೀಲ ‘ಮಕ್ಕಳಿಗಾಗಿ ಕವನಗಳನ್ನು ಬರೆಯುವುದು ಸುಲಭವಲ್ಲ. ಆದರೆ, ಮನದ ಮೂಲೆಯಲ್ಲಿ ಮಕ್ಕಳ ಬಗ್ಗೆ ತುಡಿತ ಇಟ್ಟುಕೊಂಡಿರುವ ಪ್ರಸನ್ನ ಅವರು ಮಕ್ಕಳಿಗೆ ಸರಳವಾಗಿ ತಿಳಿಯುವ ಹಾಗೆ ಸಹಜತೆಯೊಂದಿಗೆ ನಿಖರವಾಗಿ ಕವನಗಳನ್ನು ಬರೆದಿರುವರು ಎಂದು ಪ್ರಶಂಸಿಸಿದ್ದಾರೆ.
ಪುಟ್ಟನ ಪ್ರಶ್ನೆ, ಬಾಲಮಿತ್ರ, ಸುಂಟರಗಾಳಿ, ಚುಕುಬುಕು ರೈಲುಗಾಡಿ, ನನಗೂ ಇದ್ದರೆ ರೆಕ್ಕೆ, ಕಾನ್ವೆಂಟ್ ಶಾಲೆ ಹುಡುಗಿ, ಉಂಡಿ ಹಬ್ಬ ಹೀಗೆ ಒಟ್ಟು 28 ಕವನಗಳಿವೆ. ‘ಪುಟ್ಟನ ಪ್ರಶ್ನೆ’ ಕವನದ ಕೆಲ ಸಾಲುಗಳು ಇಂತಿವೆ; ಬಾನಲಿ ಚಂದ್ರನು ಬಣ್ಣವ ಬದಲಿಸಿ ತೇಲುತ ಬರುವನ್ನು ಏಕಮ್ಮ?, ಅವನ ಮೈಯಲ್ಲಿ ಏತಕೆ ಕಲೆಗಳು, ಹೊಡೆದವರ್‍ಯಾರು ಹೇಳಮ್ಮ!, ನನ್ನ ಪ್ರಶ್ನೆಗೆ ಉತ್ತರ ಕೊಡದಿರೆ, ಅಪ್ಪಗೆ ಕೇಳುವೆ ಹೋಗಮ್ಮ!
ಕೃತಿಗೆ ಮುನ್ನುಡಿ ಬರೆದ ಜಯವಂತ ಕಾಡದೇವರ, ಬನಹಟ್ಟಿ ‘ಒಬ್ಬ ಒಳ್ಳೆಯ ಕವಿಯ ಉತ್ತಮ ಕವಿತೆಗಳಿಗೆ ಮುನ್ನುಡಿ ಬರೆಯುವ ಕೆಲಸ ಸುಲಭ. ಅದನ್ನು ನಾನು ಮಾಡಿದ್ದೇನೆ ಎನ್ನುವ ಮೂಲಕ ಕವಿಯ ಸಾಮರ್ಥ್ಯ ಹಾಗೂ ಕವನ ಸಂಕಲನದ ಗುಣಮಟ್ಟವನ್ನು ಸೂಚ್ಯವಾಗಿ ಶ್ಲಾಘಿಸಿದ್ದಾರೆ.
©2024 Book Brahma Private Limited.