ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೆ. ಶಿವರಾಮ ಕಾರಂತ ಅವರ ಕೃತಿ-ಓದುವ ಆಟ. ಮಕ್ಕಳ ಸಾಹಿತ್ಯ, ವಿಜ್ಞಾನ ಸಾಹಿತ್ಯ ಹೀಗೆ ಎಲ್ಲ ಪ್ರಕಾರದ ಸಾಹಿತ್ಯವನ್ನು ಸೃಷ್ಟಿಸಿದ್ದಾರೆ. ಮಕ್ಕಳ ಮನರಂಜನೆ ಮಾತ್ರವಲ್ಲ; ಮಕ್ಕಳ ಗಂಭೀರ ಓದಿಗೂ ಅವರ ಸಾಹಿತ್ಯವಿದೆ. ಮನರಂಜನೆ ಜೊತೆಗೆ ಓದು ಅರ್ಥಪೂರ್ಣವಾಗಬೇಕೆಂಬುದು ಅವರ ಉದ್ದೇಶ. ಈ ಹಿನ್ನೆಲೆಯಲ್ಲಿ ಓದುವ ಆಟ ಕೃತಿ ಇದೆ. ಮಕ್ಕಳ ಮನೋವಿಕಾಸಕ್ಕೆ ಪೂರಕವಾಗುವ ಈ ಕೃತಿಯು ವೈಜ್ಞಾನಿಕತೆಯೂ ಈ ಸಾಹಿತ್ಯದಲ್ಲಿ ತುಂಬಿಕೊಂಡಿದೆ.
‘ಓದು, ಬರಹ ಮಕ್ಕಳಿಗೆ ಶಿಕ್ಷೆಯಾಗಬಾರದು. ಮಾತು ಬಂದ ಮೇಲೆ ಓದು, ಅಕ್ಷರ, ಬೋಧನೆಯ ಮೂಲಕ ಭಾಷೆಯನ್ನು ಕಲಿಸುವ ವಿಧಾನ ತಪ್ಪು, ಅಕ್ಷರ ಬೋಧನೆ ನಿಲ್ಲಿಸಿ, ಶಬ್ದ ಬಿಂಬ, ವಾಕ್ಯ ಬಿಂಬಗಳ ಮೂಲಕ ಭಾಷೆಯನ್ನು ಕಲಿಸಬೇಕು ಎಂಬುದು ಶೈಕ್ಷಣಿಕ ತತ್ವ. ಅದರನ್ವಯ, ಲೇಖಕರು ರಚಿಸಿದ ಗ್ರಂಥವಿದು. ಈ ಕೃತಿಯಲ್ಲಿ 34 ಅಧ್ಯಾಯಗಳಿವೆ. ರೇಖಾ ಚಿತ್ರಗಳಿವೆ. ಕಥನಗೀತೆಗಳಿವೆ. ಸರಳ ಭಾಷೆ, ಮಕ್ಕಳ ಮನಸ್ಸಿಗೆ ಹಿತವೆನಿಸುವ ವಿಷಯಗಳು ಈ ಕೃತಿಯ ಹೆಚ್ಚುಗಾರಿಕೆ. 1992ರಲ್ಲಿ ಉತ್ರರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ 1ನೇ ತರಗತಿಯ ಮಕ್ಕಳಿಗೆ ಈ ಕೃತಿಯು ಪಠ್ಯಪುಸ್ತಕವಾಗಿತ್ತು.
ಬೆಂಗಳೂರಿನ ಎಸ್.ಬಿ.ಎಸ್. ಪಬ್ಲಿಷರ್‍ಸ್ 1991ರಲ್ಲಿ (ಪುಟ: 47) ಈ ಕೃತಿಯನ್ನು ಮೊದಲ ಬಾರಿಗೆ ಪ್ರಕಟಿಸಿತ್ತು.
©2024 Book Brahma Private Limited.