ಎಳೆಯರಿಗಾಗಿ ಕಾಮನಬಿಲ್ಲು

Author : ಬಾಗೂರು ಮಾರ್ಕಾಂಡೇಯ

Pages 64

₹ 50.00




Year of Publication: 2007
Published by: ಸಪ್ನ ಬುಕ್ ಹೌಸ್
Address: ಕರ್ನಾಟಕ ಬುಕ್ಏಜೆನ್ಸಿ, ತುಂಗಾ ಕಾಂಪ್ಲೆಕ್ಸ್, ಗಾಂಧೀನಗರ, ಬೆಂಗಳೂರು-560 09
Phone: 08040114455

Synopsys

ಎಳೆಯರಿಗಾಗಿ ಕಾಮನಬಿಲ್ಲು-ಬಾಗೂರು ಮಾರ್ಕಾಂಡೇಯ ಅವರು ಬರೆದ ಮಕ್ಕಳ ಪದ್ಯಗಳು. ಖ್ಯಾತ ಗಾಯಕ ಯಶವಂತ ಹಳೀಬಂಡಿ ಅವರು ಮುನ್ರಿನುಡಿ ಬರೆದಿದ್ದು, ‘ಕಲೆ, ಸಾಹಿತ್ಯ ಸೃಜನಶೀಲತೆ ಒಟ್ಟಿಗೆ ಕೂಡಿ ಬರುವುದ ಕೆಲವರಿಗೆ ಮಾತ್ರ. ಅಂಥವರಲ್ಲಿ ಮಿತ್ರ ಬಾಗೂರು ಮಾರ್ಕಾಂಡೇಯ ಒಬ್ಬರು. ಚಿತ್ರಕಲೆಯಲ್ಲಿ ಪ್ರಭುತ್ವವನ್ನು ಸಾಧಿಸಿರುವ ಇವರ ಚಿತ್ರಕೃತಿಗಳನ್ನು ಗಮನಿಸಿದಾಗ ನಮ್ಮ ಮನಸ್ಸು ರೋಮಾಂಚನಕ್ಕೊಳಗಾಗಿ, ಎಂಥವರಾದರೂ ಇವರ ಸ್ನೇಹದ ಮೋಹಕ್ಕೆ ಸಿಲುಕುತ್ತಾರೆ. ಅಂಥ ಸೌಜನ್ಯ ಶೀಲವಂತ. ಇವರ ಚಿತ್ರಕಲೆ, ತೈಲವರ್ಣಕೃತಿಗಳು ಇವರ ಅಸಾಮಾನ್ಯ ಕಲಾ ಪಾಂಡಿತ್ಯವನ್ನು ಬಿಂಬಿಸುತ್ತವೆ. ಚಿತ್ರಕಲೆಯ ಪ್ರಭುತ್ವ ಒಂದೆಡೆಯಾದರೆ, ಇನ್ನೊಂದೆಡೆ ಇವರ ಬರೆದ ಸಾಹಿತ್ಯ ರಚನೆ ಅಚ್ಚರಿ ಮೂಡಿಸುವಂಥದ್ದು.ಹಲವಾರು ಕವನ ಸಂಕಲನಗಳು ಪ್ರಕಟವಾಗಿವೆ. ಇವರು ಮಕ್ಕಳಿಗಾಗಿ ಬರೆದ ಒಂದೊಂದು ಕವನಕ್ಕೆ ಪೂರಕವಾಗಿ ಚಿತ್ರಿಸಿದ ಒಂದೊಂದು ಚಿತ್ರ ಮಕ್ಕಳ ಮನಸ್ಸನ್ನು ಉಲ್ಲಸಿತಗೊಳಿಸುತ್ತವೆ. ಸ್ವತಃ ಪ್ರತಿಭಾವಂತ, ಅಸಾಮಾನ್ಯ ವಿನ್ಯಾಸಗಾರರಿದ್ದು, ಮಕ್ಕಳಿಗೇನು ಬೇಕೋ ಅದು ಅವರು ಕೊಡುತ್ತಾರೆ’ ಎಂದು ಪ್ರಶಂಸಿಸಿದ್ದಾರೆ.

 

About the Author

ಬಾಗೂರು ಮಾರ್ಕಾಂಡೇಯ
(28 June 1966)

ಕವಿ, ಕಲಾವಿದ, ಬಾಗೂರು ಮಾರ್ಕಾಂಡೇಯ ಅವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ (ಜನನ: 28-06-1966) ಬಾಗೂರು ಗ್ರಾಮದವರು. ಪರಿಸರ, ಮಕ್ಕಳ ಸಾಹಿತ್ಯ, ಚಿತ್ರಕಲೆ ಸೇರಿದಂತೆ ಸುಮಾರು 54ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ, ಬೇರುಗಳು ಚಿತ್ರ ಸರಣಿ ಮೂಲಕ ಪರಿಸರ ಜಾಗೃತಿಗೆ ಶ್ರಮಿಸಿದವರು, ‘ರೇಖೆಗಳಲ್ಲಿ ಭಾವಗೀತೆಗಳು’ ಮೂಲಕ ನೂತನ ಪ್ರಯೋಗಶೀಲತೆ ರೂಢಿಸಿಕೊಂಡವರು. ಕನ್ನಡದ ಸುಲಭ ಕಲಿಕೆಗೆ “ಕನ್ನಡ ಸೌರಭ” ತಂತ್ರಾಂಶ ತಯಾರಿಸಿದ್ದಾರೆ. “ಬಾಗೂರು ಕಲಾ ವೇದಿಕೆ ಟ್ರಸ್ಟ್” ರಚಿಸಿಕೊಂಡು ‘ಕಲಾ ಭೂಷಣ’ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ ಕವನ ಸಂಕಲನಗಳು: ರೇಖಾಂತರಂಗದ ಭಾವಗುಸುಮ, ಭಾವಶಿಲ್ಪ, ಭಾವೋನ್ಮಾದಿನಿ, ಭಾವಸಮ್ಮಿಲನ, ಕೊಳಲದನಿ, ಕಾವ್ಯಕನ್ನಿಕೆ,  ಚೈತ್ರ ಚೆಲುವು, ಸುವರ್ಣಪುತ್ಥಳಿ,  ಸ್ವರಸಿರಿಯ ಸ್ನೇಹಲತೆ, ರಾಧಾ ಮಾಧವರ ಒಲುಮೆ ...

READ MORE

Related Books