`ಅಮ್ಮ ಅವರ ಬಸ್ಸು ಸವಾರಿ’ ಕೃತಿಯು ವಳ್ಳಿಕಣ್ಣನ್ ಅವರ ಮೂಲ ಕೃತಿ. ಎನ್ ಪ್ರಹ್ಲಾದ್ ರಾವ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಎಸ್. ಗೋಪಾಲನ್ ಅವರು ಕೃತಿಗೆ ಚಿತ್ರಗಳನ್ನು ಬರೆದಿದ್ದಾರೆ. ಈ ಕೃತಿಯು ಮಕ್ಕಳ ಸಾಹಿತ್ಯ ಪ್ರಕಾರವಾಗಿದ್ದು, ಕೆಲವೊಂದು ವಿಚಾರಗಳು ಹೀಗಿವೆ: ವಳಿಯಮ್ಮ ಎಂಟು ವರ್ಷ ಹುಡುಗಿ. ಮನೆಯ ಹೊರಬಾಗಿಲಲ್ಲಿ ನಿಂತು ರಸ್ತೆಯಲ್ಲಿ ನಡೆಯುವುದನ್ನೆಲ್ಲ ನೋಡುವುದೆಂದರೆ ಅವಳಿಗೆ ತುಂಬಾ ಮೋಜು. ತನ್ನ ಹೆಸರೆಂದರೆ ವಳಿಯಮ್ಮಲ್ಲಿಗೆ ಇನ್ನಿಲ್ಲದ ಪ್ರೀತಿ. ಯಾರಿಗಾದರೂ ಅಷ್ಟೆ ಅಲ್ಲವೆ. ಅವರವರ ಹೆಸರೆಂದರೆ ಅವರಿಗವರಿಗೆ ಪ್ರೀತಿ. ಹಾಗೆ ತಮ್ಮ ಹೆಸರನ್ನು ಪ್ರೀತಿಸದವರೂ ಯಾರಾದರೂ ಇದ್ದಾರೆಯೆ? ಆದರೂ ವಳ್ಳಿಯಮ್ಮನಿಗೆ ತನ್ನ ಹೆಸರನ್ನು ಪ್ರೀತಿಸದವರು ಯಾರಾದರೂ ಇದ್ದಾರೆಯೇ? ಆದರೂ, ವಳ್ಳಿಯಮ್ಮನಿಗೆ ತನ್ನ ಹೆಸರನ್ನು ಕಂಡು ಕೆಲವು ಬಾರಿ ದ್ವೇಷ ಹುಟ್ಟುತ್ತಿದ್ದೂ ಉಂಟು. ಅವಳ ಗೆಳತಿಯರು ಕೆಲವು ಸಾರಿ ಅವಳ ಕುರಿತು; ವಳ್ಳಿಯಮ್ಮ ವಳ್ಳಿಯಮ್ಮ ನಿನ್ನ ಗಂಡನೆಲ್ಲಿ ಹೋದನೆ? ವಳ್ಳಿಯಮ್ಮ ವಳ್ಳಿಯಮ್ಮ ನಿನ್ನ ಗಂಡನೇಕೆ ಹೋದನ? ಹೀಗೆ ಹಾಡಿದಾಗ ವಳ್ಳಿಗೆ ಏನು ಹೇಳಬೇಕೆಂದು ತೋಚುತ್ತಿರಲಿಲ್ಲ. ಕಣ್ಣಲ್ಲಿ ನೀರು ಬರುತ್ತಿತ್ತು. ಜಿಗುಪ್ಸೆ ಯಿಂದ ಅಣಕಿಸಿ ಬಿಡುತ್ತಿದ್ದಳು ಅಷ್ಟೇ… ಎಂಬುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ.
©2024 Book Brahma Private Limited.