ಬಣ್ಣದ ಕಾರು ಸುರೇಶ ಕಂಬಳಿ ಅವರ ಶಿಶುಗೀತೆಗಳ ಸಂಕಲನವಾಗಿದೆ. ಇದೊಂದು ಪುಟ್ಟ ಕೃತಿ. ಪುಟಾಣಿಗಳಿಗೆ ಇಷ್ಟವಾಗುವಂತಹ ಕೃತಿ. ಬಹಳ ಸರಳ ಪದಗಳ ಸಣ್ಣ ಸಣ್ಣ ಸಾಲುಗಳ ಗೀತೆಗಳ ಗುಚ್ಛ. ಮಕ್ಕಳಲ್ಲಿ ಪರಿಸರದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ರಚಿಸಿದ ಗೀತೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಆರಂಭದ ಗೀತೆ `ಮಕ್ಕಳ ಲೋಕ'ದಲ್ಲಿ ಜೇನು, ಬಾನು, ಗಾಳಿ, ಬೇವಿನ ಮರ ಬರುತ್ತವೆ. ಎರಡನೇ ಗೀತೆ `ಹಸಿರು', ಸಂಪೂರ್ಣವಾಗಿ ಪರಿಸರದ ಕುರಿತದ್ದಾಗಿದೆ. ನಂತರದ ಗೀತೆ `ಬಣ್ಣದ ಕಾರು', ಇದರಲ್ಲಿಯೂ ಸಹ ಪರಿಸರದ ಅಂಶಗಳು ತುಂಬಿಕೊಂಡಿವೆ. ಜಾತ್ರೆಯಿಂದ ತಂದ ಬಣ್ಣದ ಕಾರು ಪರಿಸರ ಸ್ನೇಹಿ ಕಾರು ಎನ್ನುವ ಸಂಗತಿ, ಅದರ ಗಮ್ಮತ್ತು ಎಲ್ಲವನ್ನೂ ಮೂರು ನಾಲ್ಕು ಪದಗಳಿಂದ ರಚಿಸಿದ ಸಾಲುಗಳ ಶಿಶು ಗೀತೆ ಮಕ್ಕಳ ಓದಿಗಷ್ಟೇ ಮೀಸಲಾಗಿಲ್ಲ. ಹಿರಿಯರು ಸಹ ಓದಲೇಬೇಕಾದಂತಹದ್ದು. ಇಂತಹ ಸಾಕಷ್ಟು ಶಿಶು ಗೀತೆಗಳು ಈ ಕೃತಿಯಲ್ಲಿವೆ.
©2025 Book Brahma Private Limited.