ಕುಟ್ಟಿಂಡಿ- ಪುಟಾಣಿ ಮಕ್ಕಳಿಗಾಗಿ ಕವಿ ಬಾಗೂರು ಮಾರ್ಕಾಂಡೇಯ ಅವರು ಬರೆದ ಕವಿತೆಗಳ ಸಂಕಲನ. ಕವನಗಳಿಗೆ ಸುಂದರ ಚಿತ್ರವಿನ್ಯಾಸವೂ ಗಮನ ಸೆಳೆಯುತ್ತದೆ. ಭಾಷೆ ನಾಡು ನುಡಿಯ ಬಗ್ಗೆ ಮಕ್ಕಳಲ್ಲಿ ಅರಿವು ಉಂಟುಮಾಡುವ ಸದುದ್ದೇಶ ಪುಸ್ತಕ ರಚನೆ ಹಿಂದಿದೆ. ಒಟ್ಟು 85 ಕವಿತೆಗಳಿವೆ.
ಇಲ್ಲಿಯ ಕವಿತೆಗಳನ್ನು ಗಾಯಕ ಪಂಡಿತ್ ವೆಂಕಟೇಶ್ ಆಲ್ಕೋಡ್ ಸಂಗೀತವನ್ನು ನಿರ್ದೇಶಿಸಿದ್ದಾರೆ. ಡಾ. ಶಮಿತಾ ಮಲ್ನಾಡ್, ಗಾಯಕಿ, ಸಂಗೀತ ನಿರ್ದೇಶಕಿ ಮತ್ತು ಭವಾನಿ ಲೋಕೇಶ್ ಸುಂದರವಾದ ಮುನ್ನುಡಿಯ ಕಟ್ಟಿಕೊಟ್ಟಿದ್ದಾರೆ.ನಮ್ಮ ನಾಡು ನುಡಿಯ ಬಗ್ಗೆ ಕವಿತೆಯ ಮೂಲಕ ಕವಿ ಬಾಗೂರು ಮಾಕಾಂಡೇಯ ಅವರು ಸುಲಭವಾಗಿ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ.
©2025 Book Brahma Private Limited.