ಲೇಖಕ ಎ.ವಿ. ನಾವಡ ಅವರ ಮಕ್ಕಳ ಕೈಪಿಡಿ ಮಕ್ಕಳಿಗಾಗಿ ಅನುವಾದ. ಕೃತಿಯ ಬೆನ್ನುಡಿಯಲ್ಲಿ 'ಮಕ್ಕಳ ಸಾಹಿತ್ಯ' ಕನ್ನಡದ ಒಂದು ಪ್ರಮುಖ ಸಾಹಿತ್ಯ ಪ್ರಕಾರ. ಇಂದು ಇಳಿಮುಖವಾಗಿರುವ ಅಥವಾ ಬಳಕೆಯಿಂದ ಜಾರಿಹೋಗುತ್ತಿರು ಸಾಹಿತ್ಯ ಪ್ರಕಾರ ಎನ್ನಬಹುದು. ಅದಕ್ಕೆ ನಮ್ಮ ಶಿಕ್ಷಣ ನೀತಿ, ಸಾಮಾಜಿಕ ಸಂದರ್ಭ ಕಾರಣವಿರಬೇಕು. ಮಕ್ಕಳ ಸಾಹಿತ್ಯವನ್ನು ಹೊಸಕಾಲದ ಅಗತ್ಯಕ್ಕನುಸಾರ ಹೊಸ ವಿನ್ಯಾಸದಲ್ಲಿ ಮಕ್ಕಳಿಗೆ ನೀಡಬೇಕಾಗಿದೆ. ಪಂಜೆ, ತೋನ್ಸೆ, ಹೊಯ್ಸಳ, ಪಳಕಳ, ಎಚ್.ಎಸ್.ವಿ., ನಾ.ಡಿಸೋಜ ಮುಂತಾದವರ ಮಕ್ಕಳ ಪುಸ್ತಕಗಳನ್ನು ಇಂದಿನ ಬಾಲಕರು ಓದುವಂತಾಗಬೇಕು. ಜೊತೆಗೆ ಈ ಬಗೆಯ ಸಾಹಿತ್ಯ ಇ ಮಾಧ್ಯಮಗಳಲ್ಲಿ, ಓದು ಮಸ್ತಕ, ಕೇಳು ಪುಸ್ತಕಗಳ ರೂಪದಲ್ಲಿ ದೊರೆಯುವಂತಾಗಬೇಕು, ಆಕರ್ಷಕ ಚಿತ್ರಗಳ ಹಿನ್ನೆಲೆಯಲ್ಲಿ ಕತೆ ಮೂಡಿಬರಬೇಕು. ಅನ್ಯ ಭಾಷೆಯ ಮಕ್ಕಳ ಸಾಹಿತ್ಯ ಕನ್ನಡದಲ್ಲಿ ಅನುವಾದಗೊಳ್ಳಬೇಕು. ಈ ಬಗೆಯ ಅನೇಕ ಸಾಧ್ಯತೆಗಳನ್ನು ಶೋಧಿಸುವ ಕೆಲಸ ಈ ಪುಸ್ತಕದೊಳಗೆ ನಡೆದಿದೆ ಎಂಬ ಮಾಹಿತಿಯಿದೆ.
©2025 Book Brahma Private Limited.