ಶಾಂತಾ ನಾಗರಾಜ್ ಅವರ ’ಇಂಥಾ ಅಮ್ಮ ಬೇಕು’ ಕೃತಿ ಮಕ್ಕಳ ಮನಸ್ಸನ್ನು ಅರಿಯಲು ಯತ್ನಿಸುತ್ತದೆ. ಇದೊಂದು ಮನಃಶಾಸ್ತ್ರಕ್ಕೆ ಸಂಬಂಧಿಸಿದ ಪುಸ್ತಕವೂ ಹೌದು. ಅವರಲ್ಲಿ ಕಾಣಬರುವ ಅತಿ ಚಟುವಟಿಕೆಯ ಸಮಸ್ಯೆ, ತಾಯ್ತನದ ಸವಾಲುಗಳು/ ಜವಾಬ್ದಾರಿಗಳು, ದೇವರೆಂಬ ಭಯದ ಕೂಸು. ಬಹುಕಾರ್ಯನಿಷ್ಣಾತ ಯುವ ತಾಯಂದಿರ ಆತಂಕಗಳು, ಜಾಹೀರಾತು ಕ್ಷೇತ್ರ ಸೃಷ್ಟಿಸುತ್ತಿರುವ ಭ್ರಮಾಲೋಕ. ಮರೆವಿನ ಸೋಜಿಗ, ಮಾನಸಿಕ ಪ್ರಕ್ರಿಯೆ, ಹದಿಹರೆಯದವರ ಮಾತಿನ ವರಸೆಗಳು, ಹರೆಯದವರಲ್ಲಿ ಹೆಚ್ಚುತ್ತಿರುವ ಲೈಂಗಿಕ ಸ್ಥಿತ್ಯಂತರಗಳು ಇತ್ಯಾದಿಗಳನ್ನು ಒಳಗೊಂಡಿವೆ. ಲೇಖಕ ಎಂ, ಶ್ರೀಧರಮೂರ್ತಿ ಅವರು ಕೃತಿಗೆ ಮುನ್ನುಡಿ ಬರೆದಿದ್ದಾರೆ.
©2024 Book Brahma Private Limited.