ಕಂದ ಕಲಿ ಕವಿತೆಯಿಂದ, (ಮಕ್ಕಳ ಪದ್ಯಗಳು)-ಬಾಗೂರು ಮಾರ್ಕಾಂಡೇಯ ಅವರು ಮಕ್ಕಳಿಗಾಗಿ ಬರೆದ ಕವಿಯ ಸಂಕಲವಿದು. ಒಟ್ಟು 62 ಕವನಗಳಿವೆ. ಮಕ್ಕಳ ಮನೋವಿಕಾಸಕ್ಕೆ ಕಾವ್ಯದ ಮೂಲಕವೂ ಸಂಪನ್ಮೂಲವನ್ನು ಕಟ್ಟಿಕೊಡುವ ಪ್ರಕ್ರಿಯೆಯಂತೆ, ನೀತಿಯನ್ನು ತಿಳಿಸುವಂತೆ, ಸಾಮಾಜಿಕ ಪ್ರಜ್ಞೆಯನ್ನು ಜಾಗೃತಗೊಳಿಸುವಂತೆ ಇಲ್ಲಿಯ ಕವಿತೆಗಳಿವೆ. ಬಹುತೇಕ ಕವಿತೆಗಳು ಗೀತೆಗಳಾಗಿವೆ. ಸಾಮಾನ್ಯರಿಗೂ ಈ ಮಕ್ಕಳ ಕಾವ್ಯಗಳು ತಲುಪಿವೆ.
ಮಕ್ಕಳಿಗೆ ಇಷ್ಟವಾಗುವಂಥ ಭಾವಗಳೇ ಇಲ್ಲಿಯ ಸಾರ. ಮಕ್ಕಳ ತುಂಟತನ ಹಾಗೂ ಆಶ್ಟರ್ಯ ಕುತೂಹಲಗಳಂತೆ ವಿಸ್ಮಯ, ವಿಭಿನ್ನ ಭಾವಗಳಲ್ಲಿ ಕವಿತೆ ರಚಿಸಲಾಗಿದೆ. ಬಿಲದ ಗೂಡ ಮಾಡಿನಲ್ಲಿ ಅಡುವಂಥ ಇಲಿಯೆ ನೋಡಲೇಕೆ ಬಂದೆ ನೀನು ಅಡುಗೆ ಮನೆ ಬಳಿಯೆ ಎನ್ನುವ ....ಕವಿತೆ ಹಾಗೂ . ತರತರದ ತರಕಾರಿಗಳು ಒಂದೆಡೆ ಸಭೆಯನು ಸೇರಿದವು ಚೆಂದದ ಯೋಚನೆ ಮಾಡಿದವು ಸಂಘವನೊಂದು ನೋಂದಣಿ ಮಾಡಲು ಒಕ್ಕೊರಲಲ್ಲಿ ಕೂಗಿದವು... ಹೀಗೆ ಮಕ್ಕಳಿಗೆ ವಸ್ತುಗಳು ಮಾತನಾಡುವುದು ಇಷ್ಟ ಅಂತೆಯೇ ಈ ಪುಸ್ತಕದಲ್ಲಿ ಅಂಥದೊಂದೂ ಕುತೂಹಲ ಕವಿತೆಗಳಲ್ಲಿ ಕಾಣಸಿಗುತ್ತದೆ.
ಪಾಂಡಿತ್ಯವಿದ್ದವರು ಕವಿತೆ ಹೊಸೆದು ಬಲವಂತವಾಗಿ ಉಣಬಡಿಸುವಂಥದಲ್ಲ ಶಿಶುಸಾಹಿತ್ಯ. ಮಕ್ಕಳಲ್ಲಿ ಮಕ್ಕಳಾಗಿ ದೊಡ್ಡವರು ಪಡೆಯುವ ವೈವಿಧ್ಯಮಯ ಅನುಭವಗಳನ್ನು ವಿಭಿನ್ನ ಭಾವಗಳಲ್ಲಿ ಸುಲಲಿತವಾಗಿ ಹಾಡುವಂತೆ ಬರೆಯುವುದು, ಆ ಮೂಲಕ ಬಾಲ್ಯವನ್ನು ಪುನರ್ ಸೃಷ್ಠಿಸುವದು ನಿಜವಾದ ಶಿಶುಸಾಹಿತ್ಯ ಎಂದು ಕವಿ ಮಾರ್ಕಾಂಡೇಯ ಅವರು ಕೃತಿಯ ಪ್ರಸ್ತಾವನೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
©2024 Book Brahma Private Limited.