ಮಾತಾಟ ಮಾತೂಟ

Author : ತಮ್ಮಣ್ಣ ಬೀಗಾರ

Pages 92

₹ 60.00




Year of Publication: 2014
Published by: ಶ್ರೀಲಕ್ಷ್ಮಿ ವೆಂಕಟೇಶ್ವರ ಪ್ರಕಾಶನ
Address: ಬೆಂಗಳೂರು
Phone: 9480474629

Synopsys

ಮಲೆನಾಡಿನಿಂದ ಸುಳಿದು ಬಂದ ಸುಖದ ಗಾಳಿಯಂತೆ ತಮ್ಮಣ್ಣ ಬೀಗಾರ ಅವರ ಈ ಪುಸ್ತಕ ಮಕ್ಕಳಿಗೆ ಆಪ್ತವಾಗುತ್ತದೆ. ಮಕ್ಕಳಿಗಾಗಿ ಲಲಿತ ಪ್ರಬಂಧದ ಹೊಳಹುಗಳನ್ನು, ಮಲೆನಾಡಿನ ಪರಿಸರದಲ್ಲಿ ಮೀಯುವಂತೆ ಮಾಡಿರುವುದು ಕೃತಿಯ ವಿಶೇಷತೆ.ಮಕ್ಕಳಿಗಾಗಿ ಮಾತನಾಡುವ ಇಲ್ಲಿಯ ಪ್ರಬಂಧಗಳು ಮಕ್ಕಳನ್ನು ಸುಲಭವಾಗಿ ಮತ್ತು ಸರಳವಾಗಿ ಮಾತಾಡಿಸಬಲ್ಲವು, 

About the Author

ತಮ್ಮಣ್ಣ ಬೀಗಾರ
(22 November 1959)

ಕತೆಗಾರ ತಮ್ಮಣ್ಣ ಬೀಗಾರ  ಅವರು 1959 ನವೆಂಬರ 22 ರಂದು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೀಗಾರ ಗ್ರಾಮದಲ್ಲಿ ಜನಿಸಿದರು. ಸ್ನಾತಕೋತ್ತರ ಪದವೀಧರರು. ವೃತ್ತಿಯಿಂದ ಶಿಕ್ಷಕರು. ಪ್ರಸ್ತುತ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಬಿದ್ರಕಾನ ಶಾಲೆಯಲ್ಲಿ ಮುಖ್ಯೋಪಾಧ್ಯಯರಾಗಿ ಪ್ರಸ್ತುತ ನಿವೃತ್ತಿ ಹೊಂದಿದ್ದಾರೆ.  ಗುಬ್ಬಚ್ಚಿ ಗೂಡು, ಚಿಂವ್ ಚಿಂವ್, ಜೀಕ್ ಜೀಕ್, ಪುಟಾಣಿ ಪುಡಿಕೆ, ಸೊನ್ನೆ ರಾಶಿ ಸೊನ್ನೆ, ತೆರೆಯಿರಿ ಕಣ್ಣು ಖುಷಿಯ ಬೀಜ ಹಾಗೂ ಹಾಡಿನ ಹಕ್ಕಿ - ಮಕ್ಕಳ ಕವನ ಸಂಕಲನ. ಮಿಂಚಿನ ಮರಿ - ಶಿಶುಪ್ರಾಸ ಹೊತ್ತಿಗೆ ಕಪ್ಪೆಯ ಪಯಣ, ಜಿಂಕೆಮರಿ, ಹಸಿರೂರಿನ ಹುಡುಗ, ...

READ MORE

Related Books