‘ಬಾಯೊಳಗೇಕೆ ದುರ್ಗಂಧ?’ ಕೃತಿಯು ಎ.ಓ. ಆವಲಮೂರ್ತಿ ಅವರ ಮಕ್ಕಳ ಸಾಹಿತ್ಯ ಕೃತಿಯಾಗಿದೆ. ಪ್ರಶ್ನೆಗಳಿಲ್ಲದೆ ವಿಜ್ಞಾನವಿಲ್ಲ. ಪೊಪರ್‌ನ ಪ್ರಕಾರ ವಿಜ್ಞಾನ ಮುಂದುವರಿಯುತ್ತಿರುವುದು ಯಾರೋ ಏನನ್ನೋ ಕಂಡುಹಿಡಿದಿದ್ದರಿಂದ ಅಲ್ಲ. ಯಾರೋ ಸರಿಯಾದ ಸಂದರ್ಭದಲ್ಲಿ ಸರಿಯಾದ ಪ್ರಶ್ನೆ ಕೇಳಿದ್ದರಿಂದ, ಹೊಸ ಹೊಸ ಪ್ರಶ್ನೆ ಗಳನ್ನು ಕೇಳಿಕೊಂಡು ಅವುಗಳಿಗೆ ಸರಿಯಾದ ಉತ್ತರವನ್ನು ಕಂಡುಹಿಡಿಯುವ ಪ್ರಯತ್ನ ಮಾಡುವುದು ನಿಜವಾದ ವಿಜ್ಞಾನ, ಅದೇ ವಿಜ್ಞಾನಿಯ ನಿಜವಾದ ಲಕ್ಷಣ. ವಿಜ್ಞಾನವಷ್ಟೇ ಅಲ್ಲ, ಬೇರೆಲ್ಲ ಕ್ಷೇತ್ರಗಳ ಬೆಳವಣಿಗೆ ಮತ್ತು ಸುಧಾರಣೆಯ ಚಾಲಕಶಕ್ತಿಯೂ ಚಿಂತನಶೀಲತೆಯೇ ಆಗಿದೆ. ಚಿಂತನಶೀಲತೆಯೇ ವೈಜ್ಞಾನಿಕತೆ ಮತ್ತು ವೈಚಾರಿಕತೆಯ ತಳಹದಿ, ಚಿಂತನಶೀಲರಾದವರು ಯಾರೂ ಯಾವುದೇ ಸಂದರ್ಭದಲ್ಲೂ ಮೋಸಹೋಗುವುದಿಲ್ಲ; ಮೂಢನಂಬಿಕೆಗೆ ಬಲಿಯಾಗುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಇಲ್ಲಿ ಪತ್ರೋತ್ತರವನ್ನು ಕಥನ ರೂಪದಲ್ಲಿ - ನಿಜ ಸಂದರ್ಭಗಳ ನಡುವೆ ಸಹಜವಾಗಿ ಏಳುವ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯುವ ಪ್ರಕ್ರಿಯೆಯ ರೂಪದಲ್ಲಿ - ನೀಡಲಾಗಿದೆ. ಇಂಗಾಲದ ಅವತಾರಗಳು-2, ಭೂಮಿಯ ಮೇಲೆ ನೀರು ಬಂದದ್ದು ಹೇಗೆ?, ಧೂಮಕೇತುವಿಗೇಕೆ ಬಾಲ?, ನಮ್ಮ ಧ್ವನಿ ಬದಲಾಗುವುದೇಕೆ?, ಕೀಳುರಿತನದ ಕಥೆ, ವ್ಯಥೆ, ನಾವೆಷ್ಟು ವಾಸನೆಗಳನ್ನು ಗುರುತಿಸಬಲ್ಲೆವು?, ನಮ್ಮ ಮನೆ ಬಳಕೆಗೇಕೆ ಹೊರಗಿನ ವಿದ್ಯುತ್?, ಮೇಘಸ್ಫೋಟ ಎಂದರೇನು?, ನಾಲಗೆ ಇದ್ದರೂ ಪ್ರಾಣಿಗಳೇಕೆ ಮಾತನಾಡಲಾರವು?, ಮನೆ ಮುಂದಿನ ನುಗ್ಗೆಯಿಂದ ಕೇಡೇ?, ವಿದ್ಯುತ್ ಮೀಟರ್ ಗಳು ಕೆಲಸ ಮಾಡುವುದು ಹೇಗೆ?-4, ಬಾಯೊಳಗೇಕೆ ದುರ್ಗಂಧ?, ಹೆಪ್ಪಿಗೇಕೆ ಬೇಕು ಬೆಚ್ಚನೆಯ ಹಾಲು?, ಹೀಗೆ ಮಾಡಬಾರದೇಕೆ? ವಿಚಾರವನ್ನು ಒಳಗೊಂಡ ಪರಿವಿಡಿಗಳನ್ನು ಕಾಣಬಹುದಾಗಿದೆ.
©2024 Book Brahma Private Limited.