‘ಮೆಟ್ರೋದಲ್ಲಿ ಇಲಿ’ ಕೆ.ವಿ. ತಿರುಮಲೇಶ್ ಅವರ ಮಕ್ಕಳ ಕವಿತೆಗಳ ಸಂಕಲನ. ಈ ಕೃತಿಗೆ ಆನಂದ ಪಾಟೀಲರ ಮುನ್ನುಡಿ ಬರಹವಿದೆ. ಮನೆ, ಬಯಲು, ಕಾಡು, ಶಾಲೆ, ಮರ, ಹೂವು, ಹಕ್ಕಿ ಪಕ್ಕಿ, ಪೇಟೆ ಹೀಗೆ ಎಲ್ಲೆಂದರಲ್ಲಿ ವಸ್ತು ಸಾಮಗ್ರಿಯನ್ನು ಕೊರತೆಯಿಲ್ಲದಂತೆ ತಮ್ಮ ಹಿಡಿ ಹಿಡಿ ಮಕ್ಕಳ ಕವಿತೆಗಳಿಗೆ ತಂದುಕೊಳ್ಳುವ ಮಾದರಿಗಳನ್ನೇ ಹಿನ್ನೆಲೆಗೆ ಇಟ್ಟುಕೊಂಡದು, ಅದರಲ್ಲಿಯೇ ಹೊಸಗಾಲದ ಹೊಸ ಮಕ್ಕಳಿಗೆ ಏನೆಲ್ಲವನ್ನು ನೀಡಬಹುದಾದುದಕ್ಕೆ ತುಡಿದುದು ಕಾಣುತ್ತದೆ. ಹೀಗಿರುವ ಬಂಧದಿಂದಲೇ ಇಲ್ಲಿನ ಸಾಕಷ್ಟು ರಚನೆಗಳನ್ನು ನಮ್ಮ ಗ್ರಾಮೀಣ ಪರಿಸರದ ಮಕ್ಕಳಿಗಾಗುವ, ಗ್ರಾಮೀಣ ಮತ್ತು ಶಹರದ ಎಲ್ಲ ಮಕ್ಕಳಿಗಾಗುವ ಸಾಮಾನ್ಯದ ವಸ್ತು ಪ್ರಪಂಚ ಇಲ್ಲಿನ ಪದ್ಯಗಳಲ್ಲಿ ವಿಸ್ತೃತವಾಗಿಯೇ ಹರಡಿಕೊಂಡಿದೆ. ಹೊಸಗಾಲದ, ಹೊಸಪ್ರಯೋಗಗಳ ಮಕ್ಕಳ ಸಾಹಿತ್ಯ ಆದಷ್ಟೂ ಶಹರದ ಮಕ್ಕಳಿಗೆ ಹೆಚ್ಚು ಸ್ಪಂದಿಸಿದ್ದನ್ನು ನೋಡಿದರೆ ತಿರುಮಲೇಶರ ಬರವಣಿಗೆ ಈ ನಿಟ್ಟಿನಲ್ಲಿ ಒಂದಿಷ್ಟು ಹೊಸ ದಾರಿ ಮಾಡಿಕೊಂಡಿದೆ ಎಂದಿದ್ದಾರೆ ಆನಂದ ಪಾಟೀಲ. ಶೈಕ್ಷಣಿಕ ಉದ್ದೇಶಗಳಿಗೇ ನೇರಗೊಂಡ, ಭಾಷೆ, ಶಬ್ದ ಚಮತ್ಕಾರ, ಸಂಖ್ಯೆ, ವಾರಗಳ ಲೆಕ್ಕ, ಕನ್ನಡದ ಅಭಿಮಾನದಂಥ ವಸ್ತುಗಳು ತಿರುಮಲೇಶರ ರಚನೆಗಳಲ್ಲಿ ವಿಫುಲವಾಗಿವೆ. ಇಂಥಲ್ಲಿ ಸೊಗಸಿನವೂ ಇವೆ, ಈಗಾಗಲೇ ಸಾಕಷ್ಟು ಕಂಡಿರುವ ತೀರ ಸರಳ ಮಾದರಿಯವೂ ಇವೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.