ಬಿದರಗೇರಿ ರೇವಣಪ್ಪ ಅವರ ’ಬೇಲಿಯ ಹೂವುಗಳು’ ಕೃತಿಯು ಮಕ್ಕಳ ಸಾಹಿತ್ಯ ಪ್ರಪಂಚಕ್ಕೆ ಒಂದು ಅದ್ಭುತ ಕೊಡುಗೆಯಾಗಿದೆ. ಮಕ್ಕಳಿಗೋಸ್ಕರ ಸಾಹಿತ್ಯ ರಚಿಸುವ ಲೇಖಕರ ಕೊರತೆಯ ನಡುವೆ ಇವರ ಈ ಕೃತಿಯು ಭರವಸೆ ಮೂಡಿಸುತ್ತದೆ.
ವಿಶಿಷ್ಟ ಸಂವಹನ ಕೌಶಲ್ಯದಿಂದಾಗಿ ತಮ್ಮ ಭಾಷೆಯ ಮೂಲಕವೇ ಇವರ ಕವನಗಳು ಮಕ್ಕಳಿಗೆ ಮತ್ತು ಓದುಗರಿಗೆ ತುಂಬಾ ಹತ್ತಿರವಾಗುತ್ತವೆ. ಇದರಲ್ಲಿ ಲೇಖಕರು ಪುಟಾಣಿಗಳಿಗೆ ಮತ್ತು ಓದುಗರಿಗೆ ತಿಳಿಹೇಳುವ ಕಿವಿಮಾತು, ಸಂದೇಶ, ಮಕ್ಕಳ ಕನಸು, ಕನವರಿಕೆ, ಆಸೆ-ಆಕಾಂಕ್ಷೆಗಳನ್ನು ಮತ್ತೆ ಮತ್ತೆ ನೆನಪಿಸುತ್ತಲೇ ಮಕ್ಕಳಿಗಾಗಿಯೇ ಈ ಕವನಸಂಕಲನವನ್ನು ಮೀಸಲಿಟ್ಟಿರುವುದು ಅಭಿನಂದನಾರ್ಹವಾಗಿದೆ.
©2024 Book Brahma Private Limited.