ಕವಿ ದೊಡ್ಡರಂಗೇಗೌಡರ ಬದುಕು-ಬರೆಹ ಕುರಿತು ಕೋಗಿಲಹಳ್ಳಿ ಕೃಷ್ಣಪ್ಪ ಅವರು ಬರೆದ ಕೃತಿ-ಆದರ್ಶ ಮನುಜ. ಮಕ್ಕಳನ್ನು ಕೇಂದ್ರೀಕರಿಸಿ ಸಾಹಿತಿ ಡಾ. ದೊಡ್ಡರಂಗೇಗೌಡರ ಬದುಕಿನ ಚಿತ್ರಣ ನೀಡಲಾಗಿದೆ. ನಾಲ್ಕು ದಶಕಗಳ ಕಾಲ ನೂರಾರು ಭಾವಗೀತೆಗಳನ್ನು ಬರೆದ ಕವಿ ದೊಡ್ಡರಂಗೇಗೌಡರು ಮಕ್ಕಳಿಗೆ ಮಾದರಿ ಎನ್ನುವ ಕಾರಣಕ್ಕೆ ಇವರ ಸಾಹಿತ್ಯ ಹಾಗೂ ವ್ಯಕ್ತಿತ್ವವನ್ನು ಕಟ್ಟಿ ಕೊಡಲು ಯತ್ನಿಸಿದ್ದಾಗಿ ಲೇಖಕ ಕೋಗಿಲುಹಳ್ಳಿ ಕೃಷ್ಣಪ್ಪ ಹೇಳಿದ್ದಾರೆ.
ಕೃತಿಯ ಪರಿವಿಡಿಯಲ್ಲಿ ಗೌಡರ ಊರು-ಪರಂಪರೆ, ಬಾಲ್ಯ-ವಿದ್ಯಾಭ್ಯಾಸ, ಉದ್ಯೋಗ-ವಿವಾಹ, ವೃತ್ತಿ-ಪ್ರವೃತ್ತಿ, ಕಾವ್ಯದ ಒಳನೋಟ, ಗದ್ಯ ಸಾಹಿತ್ಯ, ಪ್ರವಾಸ ಸಾಹಿತ್ಯ, ಸಿನಿಮಾ ಸಾಹಿತ್ಯ ಹೀಗೆ ವಿವಿಧ ಶೀರ್ಷಿಕೆಗಳಡಿ ದೊಡ್ಡರಂಗೇಗೌಡರ ಬದುಕ-ಬರೆಹವನ್ನು ಸಂಕ್ಷಿಪ್ತವಾಗಿ , ಮಕ್ಕಳಿಗೆ ತಿಳಿಯುವ ಸರಳ ಭಾಷೆಯಲ್ಲಿ ಕೊಡಲಾಗಿದೆ.
©2025 Book Brahma Private Limited.