ಓದುತ್ತ, ಆಡುತ್ತ, ನಲಿಯುತ್ತ, ಕಲಿಯುತ್ತ ಬೆಳೆಯುತ್ತಿರುವ ಮಕ್ಕಳಿಗಾಗಿ ಬರೆದ ಇಲ್ಲಿನ ಕವಿತೆಗಳು ಅತ್ಯಂತ ಗೇಯತೆಯಿಂದ ಕೂಡಿವೆ. ಮೋಬೈಲ್, ಕಂಪ್ಯೂಟರ್, ವ್ಹಿಡಿಯೋಗೇಮ್‌ಗಳಲ್ಲಿ ಕಳೆದುಹೋಗುತ್ತಿರುವ ಬಾಲ್ಯಕ್ಕೆ ಒಂದಿಷ್ಟು ಕ್ರಿಯಾಶೀಲತೆ, ಚಟುವಟಿಕೆಯ ಮೂಲಕ ಹಾಡುವ ಆಡುವ ಸಂಕಲ್ಪವನ್ನಿಟ್ಟುಕೊಂಡ ಕೃತಿಯಿದು. ಮಹಾರಾಷ್ಟ್ರ ಕರ್ನಾಟಕದ ಸೀಮಾವರ್ತಿ ಪ್ರದೇಶದ ಜನರು ಮಾತಾಡುವ ಭಾಷೆಯಲ್ಲಿನ ಇಲ್ಲಿನ ಕವಿತೆಗಳು ಜವಾರಿ ಮಾತಿನ ಸೊಗಡನ್ನು ಹೊಂದಿವೆ. ಈ ಕೃತಿಯಲ್ಲಿ ಒಟ್ಟು 50 ಪದ್ಯಗಳಿದ್ದು ಇವು ಹಳ್ಳಿಯ ಪರಿಸರ, ಶಾಲಾ ಮಕ್ಕಳ ಕಿತಾಪತಿಗಳು, ಅವರ ಇಷ್ಟದ ಸಾಕು ಪ್ರಾಣ ಗಳು, ದಿನಾಲೂ ಕಾಣುವ ಪೋಸ್ಟ್‌ಮನ್, ತರಕಾರಿ ಮಾರುವ ಅಜ್ಜಿ, ಹಕ್ಕಿ-ಪಕ್ಷಿಗಳು, ರಜೆದಿನಗಳ ಮೋಜು, ಸೈಕಲ್ ಕಲಿಯುವ, ಈಜು ಕಲಿಯುವ ಪ್ರಸಂಗಗಳು, ಗೆಳೆಯರಲ್ಲಿನ ಚೇಷ್ಟೆಗಳು ಈ ಕವಿತೆಗಳಲ್ಲಿ ಪಾತ್ರಗಳಂತೆ ಸಂಚರಿಸುವುದು ಕಂಡುಬರುತ್ತದೆ. ಮಕ್ಕಳ ಮನೋವಿಕಾಸದೊಂದಿಗೆ ಅವರ ಕಲ್ಪನಾಶಕ್ತಿಗೂ ಇಂಬುನೀಡುವ ಇಲ್ಲಿನ ಕವಿತೆಗಳು ಅವರ ಮನಸ್ಸನ್ನು ಹಗುರ ಮಾಡುತ್ತವೆ. ಈ ಕೃತಿಯಲ್ಲಿ ಬಳಸಲಾದ ಒಳಚಿತ್ರಗಳು ಕವಿತೆಗಳಿಗೆ ಇನ್ನಷ್ಟು ಸಂವಹನಶೀಲತೆಯನ್ನು ಒದಗಿಸಿವೆ. ಈ ಕೃತಿಗೆ ಡಾ. ಬಸುಬೇವಿನಗಿಡದ ಅವರು ಮುನ್ನುಡಿಯನ್ನು ಬರೆದಿದ್ದು, ಡಾ. ಆನಂದ ಪಾಟೀಲರ ಬೆನ್ನುಡಿಯಿದೆ.
©2024 Book Brahma Private Limited.