ಚಂದದ ಚಲುವಿನ ಗಾಳಿಪಟ- ಕವಿ ಬಾಗೂರು ಮಾರ್ಕಾಂಡೇಯ ಅವರು ಮಕ್ಕಳಿಗಾಗಿ ಬರೆದ ಕವನಗಳ ಸಂಕಲನ. ಮಕ್ಕಳ ಬಾಲ್ಯ ಸಹಜ ಆಟ ಪಾಠ, ಮತ್ತು ತುಂಟಾಟಗಳು ಕವನ ರೂಪವನ್ನು ಪಡೆದುಕೊಂಡಿವೆ. ‘ಪಟ್ಟೆಯ ಗೋಲಿಯ ಪದ್ಯವನು ಆಡಲು ಬರುವೆಯಾ ನನ್ನೊಡನೆ ಹತ್ತು ಗೋಲಿಗಳಿವೆ ನನ್ನಲ್ಲಿ ಮುವತ್ತು ಮಾಡುವೆ ಗೆಲುವಲ್ಲಿ...’ ಎನ್ನುವ ಗಣಿತವನ್ನು ಧ್ವನಿಸುವ ತುಂಟತನದ ಕವಿತೆ. ‘.... ಹಾರುತಿದೆ ಮೇಲೇರುತಿದೆ ಲಾಗವ ಹಾಕುತ ತೇಲುತಿದೆ ಏರುತಿದೆ ಮೇಲೇರುತಿದೆ ಚೆಂದದ ಚೆಲುವಿನ ಗಾಳಿಪಟ’ ಎಂದು ಬಾಲ್ಯದ ಮಧುರ ಕ್ಷಣವನ್ನು ದಾಖಲಿಸಿದ್ದಾರೆ ಈ ಕವಿತೆಯಲಿ. ಇಂತಹ ಅನೇಕ ಕವಿತೆಗಳು ಮಕ್ಕಳಿಗೆ ಇಷ್ಟವಾಗುತ್ತದೆ ಮತ್ತು ಸುಲಭವಾಗಿ ಮಕ್ಕಳು ಹಾಡಬಹುದಾಗಿದೆ.
©2025 Book Brahma Private Limited.