ಮಕ್ಕಳ ಸಾಹಿತ್ಯದ ವಿಭಿನ್ನ ನೆಲೆಗಳು’ ಕೃತಿಯು ಗಾಯತ್ರಿ ಎಸ್. ಉಪ್ಪಾರ ಅವರ ಮಕ್ಕಳ ಚಿಂತನೆಗಳ ಕುರಿತ ಕೃತಿಯಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಸಾಹಿತಿ ಅರುಣಾ ನರೇಂದ್ರ, ‘ಮಕ್ಕಳ ಸಾಹಿತ್ಯ ಎಂದರೆ ಮೂಗು ಮುರಿಯುವ ಕಾಲವೊಂದಿತ್ತು. ಆದರೆ ಇಂದು ಮಕ್ಕಳ ಸಾಹಿತ್ಯಕ್ಕೆ ತನ್ನದೇ ಆದ ಸ್ಥಾನಮಾನವಿದೆ. ಅಂತೆಯೇ ಮಕ್ಕಳ ಸಾಹಿತ್ಯದ ನೆಲೆ ಸಮೃದ್ಧವಾಗಿ ಮತ್ತು ಸತ್ವಯುತವಾಗಿ ಹರಿದು ಬರುತ್ತಿದೆ. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ನಾವು ತಾಯಿಯನ್ನು ಕಣ್ಣಿಗೆ ಕಾಣುವ ನಡೆದಾಡುವ ದೇವರು ಎನ್ನುತ್ತೇವೆ. ಕಾರಣ, ಮಕ್ಕಳಲ್ಲಿಯ ಮುಗ್ಧತೆ, ನಿರ್ಮಲ; ನಿಸ್ವಾರ್ಥ ಮನಸು. ಈ ಹಿನ್ನೆಲೆಯಲ್ಲಿ ಮಕ್ಕಳ ಸಾಹಿತ್ಯ ಇನ್ನಿತರ ಸಾಹಿತ್ಯಕ್ಕಿಂತಲೂ ತುಸು ಭಿನ್ನವೂ, ರಂಜನೀಯವೂ ಆಗಿರುತ್ತದೆ. ಇಲ್ಲಿ ಬುದ್ದಿವಂತಿಕೆಗಿಂತಲೂ ಮಕ್ಕಳ ಮನಸ್ಸನ್ನು ತಲುಪುವ ಕ್ರಿಯೆ ಮುಖ್ಯವಾಗಿರುತ್ತದೆ. ಮಕ್ಕಳ ಸಾಹಿತ್ಯದಲ್ಲಿ ವಿಷಯದ ಬರಹವೇ ಕಾಡದು. ಎಲ್ಲವೂ ಮಕ್ಕಳ ಸಾಹಿತ್ಯದ ಪರಿಧಿಯಲ್ಲಿ ಬರುತ್ತದೆ. ಈ ನೆಲೆಯಲ್ಲಿ, ಪ್ರಸ್ತುತ ಕೃತಿಯು ತುಂಬಾ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.