ತೆಂಗು-ಕೃತಿಯನ್ನು ಪಂಡಿತ ಚನ್ನಪ್ಪ ಎರೇಸೀಮೆ ಬರೆದಿದ್ದಾರೆ. ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಈ ಕೃತಿ ಇರುವಂತೆ ಅಂದಿನ ಸಾರ್ವಜನಿಕ ಶಿಕ್ಷಣ ನಿರ್ದೇಶನಾಲಯವು ಶಿಫಾರಸು ಮಾಡಿತ್ತು. ಕೃತಿಯು 1969 ರಲ್ಲಿ ಮೊದಲ ಬಾರಿಗೆ ಮುದ್ರಣ ಕಂಡಿತ್ತು. 1989ರ ಈ ಕೃತಿಯು 4ನೇ ಆವೃತ್ತಿಯಾಗಿದೆ.
‘ತೆಂಗು’ ಎಂಬ ಒಂದೇ ಒಂದು ಗಿಡದ ನೂರೆಂಟು ಉಪಯುಕ್ತತೆಗಳನ್ನು ಮಕ್ಕಳಿಗೆ ಹಂತಹಂತವಾಗಿ ಹೇಗೆ ತಿಳಿ ಹೇಳಬೇಕೆಂಬ ಲೇಖಕರ ನಿರೂಪಣಾ ಶೈಲಿ ಈ ಕೃತಿಯ ಆಕರ್ಷಣೆ. ಏಕೆಂದರೆ, ಮಕ್ಕಳಿಗೆ ಎಲ್ಲವನ್ನೂ ತಿಳಿಸಬೇಕು ಎಂಬ ಭರದಲ್ಲಿ ಎಲ್ಲವನ್ನೂ ಒಂದೇ ಬಾರಿಗೆ ಹೇಳಬಾರದು. ಅಷ್ಟಕ್ಕೂ, ಮಕ್ಕಳಿಗೆ ತಿಳಿಯುವುದಿಲ್ಲ ಎಂಬ ನಿರ್ಲಕ್ಷ್ಯವೂ ಸಲ್ಲದು. ತೆಂಗು ಸಸಿ, ತೆಂಗು ಗಿಡ, ಅದರ ಫಲ, ಗಿಡದ ಬಾಳಿಕೆ, ರೋಗಗಳು, ಗಿಡದ ಪ್ರತಿ ಭಾಗದ ಪ್ರಯೋಜನ, ಮಾರುಕಟ್ಟೆ ಸ್ವರೂಪ ಹೀಗೆ ವಸ್ತು ವೈವಿಧ್ಯತೆ ಇರುವ ಹಾಗೆ ಅವರ ಆಸಕ್ತಿ ನಿರಂತರವಾಗಿರುವಂತೆ ಕಾಯ್ದುಕೊಳ್ಳುತ್ತಾ ಹೋಗುವ ಮೂಲಕ ತೆಂಗಿನ ಸಮಗ್ರ ಚಿತ್ರಣ ನೀಡುವ ಈ ಕೃತಿ ನಿರೂಪಣಾ ಶೈಲಿಯೊಂದಿಗೆ ಮಹತ್ವದ್ದು ಎನಿಸಿದೆ.
©2024 Book Brahma Private Limited.