ಪುಟಾಣಿ ಗೊಂಬೆ

Author : ಸುರೇಶ ಕಂಬಳಿ

Pages 66

₹ 50.00




Year of Publication: 2012
Published by: ಬಯಲದ ಕೆರೆ ಬುಕ್‌ ಟ್ರಸ್ಟ್‌
Address: ವೀರಣ್ಣ ನಿವಾಸ ,ನಾಗತಿಹಳ್ಳಿ ಪೋಸ್ಟ್‌ ,ಬೇಲೂರು ಹೋಬಳಿ, ಮಂಡ್ಯ ಜಿಲ್ಲೆ 571811

Synopsys

ಪುಟಾಣಿ ಗೊಂಬೆ ಸುರೇಶ್‌ ಕಂಬಳಿ ಅವರ ಶಿಶುಗೀತೆಗಳ ಸಂಕಲನವಾಗಿದೆ. ಕನ್ನಡದಲ್ಲಿ ಈಗ ಮಕ್ಕಳಿಗಾಗೇ ಬರೆಯುತ್ತಿರುವ ಸಾಹಿತಿಗಳ ಸಂಖ್ಯೆ ಆಶಾದಾಯಕವಾಗಿ ಬೆಳೆಯುತ್ತಿರುವುದು ಸಂತಸದ ಸಂಗತಿ, ಮಕ್ಕಳ ಮನಸ್ಸನ್ನು, ಅವರ ಕಲ್ಪನಾ ಪ್ರಪಂಚವನ್ನು ಅರ್ಥಮಾಡಿಕೊಂಡು ಬರೆಯುವುದು ಸವಾಲಿನ ಕೆಲಸ. ಹಾಗೂ ಪ್ರಪಂಚದ ನಾನಾ ವಿಷಯಗಳ ಬಗ್ಗೆ ಮಕ್ಕಳಿಗೆ ಇರುವ ಸಹಜ ಕುತೂಹಲ ತಣಿಸುವಂತೆ ಅವರ ಭಾವಪ್ರಪಂಚವನ್ನು ವಿಸ್ತರಿಸಬೇಕು. ಇಂಥ ಸಾರ್ಥಕ ಕೆಲಸದಲ್ಲಿ ಸುರೇಶ್ ಕಂಬಳಿ ಅವರು ತೊಡಗಿಕೊಂಡಿದ್ದಾರೆ. ಅವರು ಪ್ರಾಥಮಿಕ ಶಾಲೆಯ ಅಧ್ಯಾಪಕರಾಗಿ ಮಕ್ಕಳ ಒಡನಾಟದಲ್ಲಿರುವುದರಿಂದ ಮಕ್ಕಳ ಆಸಕ್ತಿ, ಅಭಿರುಚಿಗಳ ಬಗ್ಗೆ ಸಹಜ ತಿಳುವಳಿಕೆ ದೊರೆತಿದೆ. ಹೀಗಾಗಿ 'ಪುಟಾಣಿ ಗೊಂಬೆ' ಶಿಶುಗೀತೆಗಳು ಮಕ್ಕಳಿಗೆ ಹಿತವೆನಿಸುವ ವಿಷಯಗಳನ್ನು, ಅತ್ಯಂತ ಸರಳವಾದ ಲಯಬದ್ಧ ಹಾಡುಗಾರಿಕೆ ಮೂಲಕ ಅಭಿವ್ಯಕ್ತಿಸುವಲ್ಲಿ ಅವರಿಗೆ ಅಪೂರ್ವ ಯಶಸ್ಸು ದೊರೆತಿದೆ ಎಂದು ಡಾ. ಮೀರಾಸಾಬಿಹಳ್ಳಿ ಶಿವಣ್ಣ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಸುರೇಶ ಕಂಬಳಿ
(03 June 1985)

ಸುರೇಶ ಕಂಬಳಿ ಅವರು ಕೊಪ್ಪಳ ತಾಲೂಕಿನ ಗಬ್ಬೂರು  ಗ್ರಾಮದವರು. ಸ್ನಾತಕೋತ್ತರ ಪದವೀಧರರು. ತಂದೆ ರಾಮಣ್ಣ ಕಂಬಳಿ, ತಾಯಿ ಶಾವಂತ್ರಮ್ಮ. ಕಳೆದ 13 ವರ್ಷಗಳಿಂದ ನಂದಿಹಳ್ಳಿ ಜೆ ‍ಹಾಗೂ ಕನ್ನೇರಮಡು ಶಾಲೆಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಅವರು ಸದ್ಯ ಹಾಸಗಲ್ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಲವಾರು ನಾಟಕಗಳಲ್ಲಿ ಅಭಿನಯಿಸಿ ನೇತ್ರದಾನ, ರಕ್ತದಾನ ಇನ್ನಿತರ ಧ್ವನಿಸುರುಳಿಗೆ, ಹಾಗೂ ಚಲನಚಿತ್ರಗಳಿಗೆ ಸಾಹಿತ್ಯ ನೀಡಿದ್ದಾರೆ. ಜಾನಕಿ,ಕಾವೇರಿ, ಜನಕ ಶೈಕ್ಷಣಿಕ  ಕಿರುಚಿತ್ರಗಳು ಇವರ ಕತೆ ನಿರ್ಮಾಣದಲ್ಲಿ ಮೂಡಿಬಂದಿದ್ದು ಹೆಗ್ಗಳಿಕೆ . ಅವರ ಕವಿತೆ, ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿರುತ್ತವೆ.  ಪ್ರಶಸ್ತಿಗಳು: ಸಂಕ್ರಮಣ ಕಾವ್ಯಪುರಸ್ಕಾರ, ಮಾತೋಶ್ರೀ ಮಾಣಿಕ್ಯ, ಕಲ್ಯಾಣ ಕಣ್ಮಣಿ, ಕನ್ನಡ ಶಿಖಾಮಣಿ, ...

READ MORE

Related Books