ಸಾಹಿತ್ಯ ಕೃಷಿಗಿಳಿದ ರಾಯಚೂರಿನ ಮಾನ್ವಿ ತಾಲ್ಲೂಕಿನ ಮಲ್ಕಾಪುರ ಸರ್ಕಾರಿ ಶಾಲೆಯ ಮಕ್ಕಳ ಬರಹಗಳ ಗುಚ್ಚ ಮಂದಾರ ಮಾಲೆ. ಈ ಶಾಲೆಯ ಶಿಕ್ಷಕರಾದ ರವಿಚಂದ್ರ ಅವರ ಸಂಪಾದಕತ್ವದಲ್ಲಿ ಶಾಲಾ ಮಕ್ಕಳ ಪತ್ರಿಕೆ ಮಂದಾರ ಕನ್ನಡ ಪ್ರಕಟವಾಗುತ್ತಿದೆ. ಇದರ ವಾರ್ಷಿಕ ಸಂಚಿಕೆ ಮಂದಾರಮಾಲೆಗೆ ಮಕ್ಕಳು ಬರೆದ ಬರಹಗಳನ್ನು ರವಿಚಂದ್ರ ಅವರು ಸಂಪಾದಿಸಿ ಮಂದಾರ ಮಾಲೆ ಹೆಸರಿನಲ್ಲಿ ಸಮಗ್ರ ಸಂಕಲನವಾಗಿ ಪ್ರಕಟಿಸಿದ್ದಾರೆ. ಮಕ್ಕಳು ಬರೆದ ಕವಿತೆ, ಚುಟುಕುಗಳು, ಪ್ರಬಂಧ, ಕಥೆಗಳು ಮುಂತಾದವು ಈ ಕೃತಿಯಲ್ಲಿವೆ. ಮಕ್ಕಳ ಬರಹಗಳು ಸರಳಶೈಲಿಯಲ್ಲಿವೆ. ಮಕ್ಕಳ ಅನುಭವಗಳಿಗೂ ಇಲ್ಲಿ ಬರಹ ರೂಪ ಸಿಕ್ಕಿದೆ.
©2025 Book Brahma Private Limited.