‘ಮಕ್ಕಳನ್ನು ಬೈಯುವುದು ಹೇಗೆ’ ಕೃತಿಯು ಆರ್. ಶ್ರೀನಾಗೇಶ್ ಅವರ ಮಕ್ಕಳ ಕುರಿತಾದ ಲೇಖನಗಳ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಮಕ್ಕಳ ಮೇಲೆ ಸಿಟ್ಟು ಬರುತ್ತದೆ. ಆ ಸಿಟ್ಟಿಗೆ ನಾವೇ ಕಾರಣಕರ್ತರೂ ಆಗಿರುತ್ತೇವೆ ಅನ್ನುವುದನ್ನು ಮರೆತು ಮಕ್ಕಳನ್ನು ಬೈಯುತ್ತೇವೆ. ಆದರೆ ಆ ಬೈಗಳು ಅವರನ್ನು ತಿದ್ದುವಂತಿರಬೇಕು ಎಂಬ ಮಾತನ್ನು ಎಲ್ಲರೂ ಹೇಳುತ್ತಾರೆ. ಹಾಗೆ, ಸಕಾರಾತ್ಮಕವಾಗಿ ಬೈಯುವುದು ಹೇಗೆ ಎಂಬ ಕಲೆಯನ್ನು ಈ ಕೃತಿಯಿಂದ ತಿಳಿಯಬಹುದು. ಹಾಗೆಯೇ ಇಲ್ಲಿ ಒಂದು ಉದಾಹರಣೆಯನ್ನು ಕೊಡುವ ಮೂಲಕ ಲೇಖಕರು ಹೀಗೆ ವಿಚಾರವನ್ನು ಕಟ್ಟಿಕೊಟ್ಟಿದ್ದಾರೆ; `ಅಪ್ಪ ಬರಲಿ ತಾಳು‘ ಎಂದು ಅಮ್ಮಂದಿರು ಮಕ್ಕಳನ್ನು ಬೈಯುವುದಿದೆ. ಆಗ ಮಗುವಿಗೆ ಅಮ್ಮನ ಕೈಲಿ ಏನೂ ಮಾಡೋಕ್ಕಾಗೋಲ್ಲ. ಆದ್ದರಿಂದ ಅಮ್ಮನಿಗೆ ಹೆದರಬೇಕಾಗಿಲ್ಲ. ಅಪ್ಪನಿಗೆ ಗೊತ್ತಾಗದ ಹಾಗೆ ನೋಡಿಕೊಂಡರೆ ಸಾಕು ಎಂಬ ಭಾವನೆ ಬರುತ್ತದೆ. ಅಂಥ ಹೊತ್ತಲ್ಲಿ, ಅಪ್ಪ ಬಂದಾಗ `ಅಮ್ಮ ಸುಮ್ನೆ ನನ್ನನ್ನು ಬೈತಿರ್ತಾಳೆ‘ ಅಂತ ಚಾಡಿ ಹೇಳುವ ಅಪಾಯವೂ ಇರುತ್ತದೆ ಎನ್ನುತ್ತಾರೆ ಲೇಖಕ ಶ್ರೀನಾಗೇಶ್. ಹೀಗೆ ಅಪರೂಪದ ಉಪಯುಕ್ತ ಮಾಹಿತಿಗಳು ಈ ಕೃತಿಯ ಉದ್ದಕ್ಕೂ ಸಿಗುತ್ತದೆ.
©2024 Book Brahma Private Limited.