ನವ ಕರ್ನಾಟಕ ಪ್ರಕಾಶನದ ಪುಟ್ಟ - ಕಿಟ್ಟ ವಿಜ್ಞಾನ ಸಂವಾದದ -13ನೇ ಕೃತಿ- ಗಿಳಿಗಳು ಮಾತನಾಡುವುದು ಹೇಗೆ?. ಪ್ರತಿ ಜೀವಿಗೂ ಸಂವಹನ ಎನ್ನುವುದು ಬಹುಮುಖ್ಯವಾಗುತ್ತದೆ. ಮನುಷ್ಯರಾದವರು ದನಿ, ಲಿಪಿ, ಸಂಕೇತಗಳ ಮೂಲಕ ಸಂವಹನ ನಡೆಸಿದರೆ ಪ್ರಾಣಿ-ಪಕ್ಷಿಗಳು ಹೇಗೆ ಸಂಭಾಷಣೆ ನಡೆಸುತ್ತವೆ ಎನ್ನುವ ಕುತೂಹಲ ಎಲ್ಲರಲ್ಲೂ ಇರುತ್ತದೆ. ಅಂತಹ ಹಲವಾರು ಪ್ರಶ್ನೆಗಳಿಗೆ ಹಾಗೂ ವಿವಿಧ ತಳಿಯ ಗಿಳಿಗಳು, ಭಿನ್ನ ದೇಶದ ಗಿಳಿಗಳು ಹೇಗೆ ಮಾತನಾಡುತ್ತವೆ ಎಂಬುದನ್ನು ಮಕ್ಕಳಿಗೆ ಕುತೂಹಲಕಾರಿಯಾಗಿ ಈ ಕೃತಿಯಲ್ಲಿ ನೀಡಿದ್ದಾರೆ ಲೇಖಕರು.
©2024 Book Brahma Private Limited.