ಮಕ್ಕಳ ಅಸೀಮ ಕುತೂಹಲ, ಅದಮ್ಯ ಉತ್ಸಾಹ, ಲೋಕದ ಸಮಸ್ತ ವಸ್ತು ವಿಷಯಗಳ ಕುರಿತಾದ ಆತ್ಯಂತಕ ವಿಸ್ಮಯಗಳನೆಲ್ಲ ತಣಿಸುವಂತೆ, ಅವರಲ್ಲಿ ಸಾಹಿತ್ಯಾಸಕ್ತಿಯನ್ನೂ ಬೆಳೆಸುವಂತೆ ಬರೆಯುವ ಸವಾಲಿನ ನಡುವೆ ಈ ಕೃತಿಯಲ್ಲಿ ವಿಜಯಶ್ರೀ ಹಾಲಡಿಯವರು ತಮ್ಮ ವಿನೂತನ ಅಭಿವ್ಯಕ್ತಿ ಕ್ರಮದಿಂದ ಮಕ್ಕಳ ಮನ ಸೆಳೆಯುವಂತಹ ಪದ್ಯಗಳನ್ನು ರಚಿಸಿದ್ದಾರೆ. ಇಲ್ಲಿರುವ ಐವತ್ತು ಪದ್ಯಗಳಲ್ಲಿ ಬೆಕ್ಕು-ನಾಯಿಗಳ ಕುರಿತಾದ ಪದ್ಯಗಳೇ ಹೆಚ್ಚು. ಮಾತ್ರವಲ್ಲದೇ ಇತರ ಪ್ರಾಣಿ-ಪಕ್ಷಿ ಪ್ರಪಂಚದ ಸೂಕ್ಷ್ಮ ನಿರೀಕ್ಷಣೆಯೊಂದಿಗೆ ಸೂಕ್ಷ್ಮ ಅಭಿವ್ಯಕ್ತಿಯಿದೆ. ಅವುಗಳ ಜೀವನಕ್ರಮವನ್ನು ಮಾನವ ಸಂದರ್ಭಗಳಲಿಟ್ಟು ನೋಡಿದ್ದು ಇಲ್ಲಿನ ಪದ್ಯಗಳ ವೈಶಿಷ್ಟ್ಯ.
©2024 Book Brahma Private Limited.