ನಮ್ಮ ಶಾಲೆಯ ಹೂಬನ; ಮಕ್ಕಳಿಗಾಗಿ ಕವಿ ಬಾಗೂರು ಮಾರ್ಕಾಂಡೇಯ ಅವರು ಬರೆದ 91 ಕವಿತೆಗಳ ಗುಚ್ಚವಿದು. ಮಕ್ಕಳಿಗೆ ಇಷ್ಟವೆನಿಸುವ ಅನೇಕ ಭಾವಗಳನ್ನು ಕವನ ರೂಪದಲ್ಲಿ ಅಭಿವ್ಯಕ್ತಿಸಲಾಗಿದೆ. ಶಿಶುಸಾಹಿತ್ಯದ ಕಡೆ ಮೊದಲಿನಿಂದಲೂ ಒಲವು ಕಡಿಮೆ ಇದ್ದು, ಈ ನಿರ್ಲಕ್ಷ್ಯವನ್ನು ಕೊನೆಗಾಣಿಸಬೇಕು. ಶಿಶುಸಾಹಿತ್ಯವು ಬೆಳೆಸಿ ಪ್ರೋತ್ಸಾಹಿಸುವ ಅಗತ್ಯವಿದೆ. ಕವಿತೆ ಮನದ ಹೂ ಬಲದಲ್ಲಿ ಅರಳುವುದು ಅಪರೂಪವೆಂಬಂತೆ ನನ್ನ ಬಾಲ್ಯವು ಇ ಕವಿತೆಗಳಿಗೆ ಪ್ರೇರಣೆಯಾಗಿದೆ. ಹಾಗಾಗಿ ಬರೆದಿದ್ದೇನೆ. ಮಕ್ಕಳೆಂದರೆ ಎಲ್ಲಿಲ್ಲದ ಅಕ್ಕರೆ. ಯಾವುದೇ ಒಂದು ಚೌಕಟ್ಟಿಗೆ ನನ್ನನ್ನು ಬಂಧಿಸದೆ ವಿಸ್ತಾರವಾಗುವ ಪ್ರಯತ್ನದಲ್ಲಿ ಸಾರ್ಥಕತೆ ಕಂಡುಕೊಳ್ಳುವ ಕಾಯಕ ಮಾಡಿದ್ದೇನೆ ಹೂಬನದಲ್ಲಿ ಹೂವುಗಳು ಹಲವು ಬಣ್ಣ ಬಣ್ಣವ ತೊಟ್ಟಿಹವು ಸುಭ್ರ ಬೆಳಕಿನ ಬಿಸಿಲಲಿ ನಕ್ಕು ಬಗೆ ಬಗೆ ಕಂಪನು ಚೆಲ್ಲಿಹವು.... ಎಂಬಂತೆ ಮಕ್ಕಳಿಗೆ ಪ್ರಿಯವಾಗುವ ವಿಷಯದ ಕವಿತೆಗಳು ಈ ಸಂಗ್ರಹದಲ್ಲಿದೆ ಎಂದು ಕವಿಗಳು ಸಾಹಿತ್ಯಾಸಕ್ತರಲ್ಲಿ ತಮ್ಮ ವಿನಮ್ರತೆ ತೋರಿದ್ದಾರೆ.
©2025 Book Brahma Private Limited.