ಪಂಡಿತ ಚನ್ನಪ್ಪ ಎರೇಸೀಮೆ ಅವರು ಬರೆದ ಕೃತಿ-ಜೇನು. ಮಕ್ಕಳಿಗಾಗಿ ಜೇನು ನೋಣ, ಪೆಟ್ಟಿಗೆಗಳು, ಹೂವುಗಳಿಂದ ಮಕರಂದ ಹೊತ್ತು ತರುವ ತರುವ ಜೇನು ನೋಣಗಳು, ಗೂಡುಗಳ ಅದ್ಭುತ ರಚನೆ, ಅಲ್ಲಿ ಸಂಗ್ರವಾಗುವ ಜೇನು, ಅದನ್ನು ಬಿಡಿಸುವ ಬಗೆ, ಜೇನಿನಲ್ಲಿಯ ಔಷಧಿಯ ಗುಣಗಳು ಜೀನಿನ ಸಮಗ್ರ ವಿವರವನ್ನು ಹಂತಹಂತವಾಗಿ ಮಕ್ಕಳಿಗೆ ತಿಳಿಯುವ ರೀತಿಯ ನಿರೂಪಣಾ ಶೈಲಿಯಲ್ಲಿ ಪಂಡಿತ ಚನಮ್ನಪ್ಪ ಎರೇಸೀಮೆ ಅವರು ಬರೆದಿದ್ದಾರೆ. ಮೈಸೂರು ಸರ್ಕಾರದ ವಿದ್ಯಾ ಇಲಾಖೆಯಿಂದ ಬಹುಮಾನ ಪಡೆದ ಕೃತಿ ಇದು. ಅಂದಿನ ರಾಜ್ಯದ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಗ್ರಂಥಾಲಯಗಳಲ್ಲಿ ಈ ಕೃತಿಯನ್ನುಇರಿಸಲು ಅಂದಿನ ಸರ್ಕಾರ (1964) ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿತ್ತು. ಈ ಖೃತಿಯು ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡುವ ಉತ್ತಮ ಕೃತಿ ಇದಾಗಿದೆ. 1963ರಲ್ಲಿ ಕೃತಿಯ ಮೊದಲ ಬಾರಿಗೆ ಮುದ್ರಣಗೊಂಡಿತ್ತು. ಪ್ರಸ್ತುತ ಕೃತಿಯು 4ನೇ ಆವೃತ್ತಿಯಾಗಿದೆ.
ಖ್ಯಾತ ಕಾದಂಬರಿಕಾರ ಅ.ನ.ಕೃ. ಅವರು ಈ ಕೃತಿಯ ಬಗ್ಗೆ ‘ಎರೇಸೀಮೆ ಅವರು ಮಕ್ಕಳ ಮನಸ್ಸು, ಅಭಿರುಚಿಗಳನ್ನು ಅರಿತು, ಅವುಗಳಿಗೆ ಅನುಗುಣವಾಗಿ ಬರೆಯಬಲ್ಲ ದಕ್ಷ ಲೇಖಕರಲ್ಲಿ ಒಬ್ಬರು. ಜೇನು -ಪುಸ್ತಕದ ಭಾಷೆ, ನಿರೂಪಣೆ, ಭಾವಾಭಿವ್ಯಕ್ತಿಗಳೆಲ್ಲವೂ ತೃಪ್ತಿಕರವಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
©2025 Book Brahma Private Limited.