ರಘುನಾಥ ಅವರು ಮಕ್ಕಳಿಗಾಗಿ ಬರೆದ ಇಲ್ಲಿಯ ಪದ್ಯಗಳಲ್ಲಿ ಸರಳವಾದ ಲಯಬದ್ಧ ಕಾಮನಬಿಲ್ಲಿನಂತಹ ರಂಗನ್ನು ಸಾಧಿಸಿವೆ. ವಾಸ್ತವದ ಮನೋರತವನ್ನು ಮಕ್ಕಳ ಮನಕ್ಕೆ ಕವನಗಳನ್ನು ದಾಟಿಸುತ್ತವೆ.
‘ಎಲೆಯಿಂದ ಉರುಳಿದರೆ ಹೋಗುವುದಾದರೂ ಎಲ್ಲಿಗೆ? ಎಲ್ಲಿದೆ ಹಳ್ಳ ಎಲ್ಲಿದೆ ಕೊಳ್ಳ ಮುಗಿಯಿತೆ ಬದುಕು ಇಂದಿಗೆ?’ (ಮಳೆ ಹನಿಯ ಅಳು) ಹರಿಯುವ ನೀರು ಒಂದು ಹನಿಯಾಗಿ ಸ್ಥಗಿತಗೊಳ್ಳುವುದು, ತನ್ನ ಮುಂದಿನ ಗತಿಯನ್ನು ನೆನೆದು ಮಳೆಯಹನಿ ಕಂಬನಿ ಕರೆಯುವುದು. ರಘುನಾಥರ ಸೂಕ್ಷ್ಮ ಮತ್ತು ಧ್ವನಿಪೂರ್ಣವಾದ ಕಾವ್ಯ ಸಂವೇದನೆಯ ಮತ್ತು ಪರಿಸರ ಕಾಳಜಿಯ ಮನೋಹರ ಅಭಿವ್ಯಕ್ತಿಯಾಗಿದೆ’ ಎಂದು ಮುನ್ನುಡಿಯಲ್ಲಿ ಶ್ಲಾಘಿಸಿದ್ದಾರೆ ಕವಿ ಎಚ್. ಎಸ್. ವೆಂಕಟೇಶಮೂರ್ತಿ.
©2025 Book Brahma Private Limited.