ಏ ಬೀಳ್ತೀಯಾ ಹುಷಾರು!

Author : ನಡಹಳ್ಳಿ ವಸಂತ್‌

Pages 126

₹ 95.00




Year of Publication: 2011
Published by: ಭೂಮಿ ಬುಕ್ಸ್‌
Address: ಬೆಂಗಳೂರು
Phone: 9964351655

Synopsys

ನಡಹಳ್ಳಿ ವಸಂತ್‌ ಅವರು ಮಕ್ಕಳ ಮಾನಸಿಕ ಜಗತ್ತಿನ ಒಳನೋಟಗಳ ಬಗೆಗೆ ಬರೆದ ಕೃತಿ ‘ಏ ಬೀಳ್ತೀಯಾ ಹುಷಾರು!’. ಮಕ್ಕಳನ್ನು ತಿದ್ದುವುದು ಅಂದರೆ ಉಪದೇಶ, ಬುದ್ಧಿವಾದ, ಕಟುವಾದ ಶಿಸ್ತು, ಶಿಕ್ಷೆ ಅಥವಾ ಬಹುಮಾನಗಳಿಂದ ಎಂದು ನಮ್ಮೆಲ್ಲರ ತಿಳುವಳಿಕೆ. ನಮ್ಮ ಹಿರಿಯರು ಇದನ್ನೇ ಹೇಳಿದ್ದರು ಮತ್ತು ನಮ್ಮನ್ನು ಇದೇ ರೀತಿ ಬೆಳೆಸಿದ್ದರು ಕೂಡ. ಆದರೆ ಮನಃಶಾಸ್ತ್ರೀಯ ಸಂಶೋಧನೆಗಳಲ್ಲಿ ಇದಕ್ಕೆ ಆಧಾರಗಳಿಲ್ಲ. ಮಕ್ಕಳ ವ್ಯಕ್ತಿತ್ವ ನಮ್ಮ ಮಾತಿನಿಂದಲ್ಲ ನಮ್ಮ ನಡವಳಿಕೆಯಿಂದ ರೂಪಿತವಾಗುತ್ತದೆ. ಮಾತುಗಳು ನಮ್ಮ ನಡವಳಿಕೆಗೆ ಪೂರಕವಾಗಿದ್ದಾಗ ಮಾತ್ರ ಪರಿಣಾಮಕಾರಿಯಾಗುತ್ತದೆ. ಹಾಗಾಗಿ ಮಕ್ಕಳಲ್ಲಿ ಬದಲಾವಣೆ ಅಪೇಕ್ಷಿಸುವ ಪೋಷಕರು ತಮ್ಮ ನಡೆ ನುಡಿಗಳನ್ನು ಮೊದಲು ಅವಲೋಕಿಸಬೇಕು. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ನಮ್ಮ ನಿತ್ಯಜೀವನದ ಸಾಮಾನ್ಯ ಅನ್ನಿಸಬಹುದಾದ ಆಗುಹೋಗುಗಳು ಮಕ್ಕಳನ್ನು ಹೇಗೆ ರೂಪಿಸುತ್ತವೆ ಮತ್ತು ಈ ಬಗೆಗೆ ನಾವೇನು ಮಾಡಬಹುದು-ಎನ್ನುವುದರ ಸರಳ ಆಲೋಚನೆಗಳು ಇವು. ಒಬ್ಬ ಆಪ್ತಸಮಾಲೋಚಕನ ಅನುಭವ, ಸುತ್ತಲಿನ ಜನರಲ್ಲಿ ಕಂಡಿದ್ದು, ತನ್ನದೇ ಸ್ವಂತ ಪ್ರಯೋಗಗಳು ಈ ಬರಹಗಳಿಗೆ ಆಧಾರ. ಇಲ್ಲಿನ ಉದ್ದೇಶ ಮಕ್ಕಳಲ್ಲಿ ಜ್ಞಾಪಕಶಕ್ತಿ ಹೆಚ್ಚಿಸುವುದಾಗಲೀ ಅಥವಾ ಅವರು ರ‍್ಯಾಂಕ್ ಗಳಿಸುವಂತೆ ಮಾಡುವುದಾಗಲೀ ಅಲ್ಲ. ಅವರು ಸುಸಂಸ್ಕೃತರಾಗಿ ನೆಮ್ಮದಿಯ ಬದುಕನ್ನು ಬದುಕಬೇಕೆನ್ನುವುದು ಮಾತ್ರ. ಮಕ್ಕಳ ಐ ಕ್ಯೂ [ಇಂಟಲಿಜೆನ್ಸ್ ಕೋಷೆಂಟ್ ಅಂದರೆ ಬುದ್ಧಿವಂತಿಕೆಯ ಮಟ್ಟ] ಹೆಚ್ಚಿಸಬೇಕೆನ್ನುವವರಿಗೆ ಇಲ್ಲಿ ಉಪಯುಕ್ತ ಮಾಹಿತಿಗಳೇನೂ ದೊರೆಯಲಾರದು. ಮಕ್ಕಳ ಇ ಕ್ಯೂ [ಎಮೋಶನಲ್ ಕೋಷೆಂಟ್ ಅಂದರೆ ಭಾವನಾತ್ಮಕ ಸ್ಥಿರತೆಯ ಮಟ್ಟ]ವನ್ನು ಹೆಚ್ಚಿಸುವುದು ಹೇಗೆ ಮತ್ತು ಅದರಿಂದಾಗುವ ಉಪಯೋಗಗಳೇನು ಎಂಬುದರ ಬಗೆಗೆ ಒತ್ತು ನೀಡಲಾಗಿದೆ. ಅಂತಿಮ ಗುರಿ ಮಕ್ಕಳ ವ್ಯಕ್ತಿತ್ವದಲ್ಲಿ ಬದಲಾವಣೆ ತರುವುದಾಗಿದ್ದರೂ ಅದು ಪೋಷಕರ ಮೂಲಕವೇ ಆಗಬೇಕಾದ್ದರಿಂದ ಇಲ್ಲಿನ ಕಕ್ಷಿದಾರರು ಮಕ್ಕಳಲ್ಲ, ಪೋಷಕರು! ಸಂಭಾಷಣೆಯ ಲಘು ಮಾದರಿಯಲ್ಲಿ ನಿರೂಪಣೆಯಿದೆ. ಎಲ್ಲದಕ್ಕೂ ಮನಃಶಾಸ್ತ್ರೀಯ ಹಿನ್ನೆಲೆ ಇದ್ದರೂ ಸಿದ್ದಾಂತಗಳನ್ನು ಮಂಡಿಸದೆ ಸರಳ ಘಟನೆಗಳ ಮೂಲಕ ಮನಮುಟ್ಟುವಂತೆ ವಿವರಿಸಲಾಗಿದೆ. ಯಾವುದೇ ವಿದ್ಯಾಭ್ಯಾಸವಿಲ್ಲದೆ ಬರಿಯ ಅಕ್ಷರಸ್ಥರಾದವರಿಗೂ ಸೂಕ್ಷ್ಮ ವಿಚಾರಗಳನ್ನು ಸರಳವಾಗಿ ಮನವರಿಕೆ ಮಾಡಿಕೊಡುವ ಪ್ರಯತ್ನ ಇದು.. ನಾವು ಕೊಟ್ಟ ಪ್ರೀತಿಯನ್ನು ಮಕ್ಕಳಿಂದ ಹಿಂಪಡೆಯುವ ಅಪೇಕ್ಷೆ ಮಾಡದೆ, ಅದನ್ನು ಅವರು ಮುಂದಿನ ತಲೆಮಾರಿಗೆ ವರ್ಗಾಯಿಸುವಂತೆ ಮಾಡುವುದು ಸಾಧ್ಯವಾದರೆ ಖಲೀಲ್ ಗಿಬ್ರಾನ್‌ನ ‘ಜೀವನ ಹಿಮ್ಮುಕವಾಗಿ ಹರಿಯದಿರಲಿ’ ಎಂಬ ಆಶಯವನ್ನು ಪೂರೈಸಬಹುದು. ಇದರಿಂದ ಕೌಟುಂಬಿಕ ಜೀವನ ಮತ್ತು ಒಟ್ಟಾರೆ ಸಾಮಾಜಿಕ ಬದುಕು ಒಂದು ಸುಂದರ ಅನುಭವವಾಗಬಲ್ಲದು ಎಂಬ ನಂಬಿಕೆ ಲೇಖಕರದ್ದು.

About the Author

ನಡಹಳ್ಳಿ ವಸಂತ್‌

ನಡಹಳ್ಳಿ ವಸಂತ್‌ ಅವರು 04 04 1958ರಂದು ಸೊರಬದಲ್ಲಿ ಜನಿಸಿದರು. ಬಿಬಿಎಮ್‌ ಹಾಗೂ ಆಪ್ತಸಮಾಲೋಚನೆ ಮತ್ತು ಮನೋಚಿಕಿತ್ಸವಿಷಯದಲ್ಲಿ ಎಂ. ಎಸ್‌ ಪೂರೈಸಿದರು. ವೃತ್ತಿಯಲ್ಲಿ ಮನೋಚಿಕಿತ್ಸೆ ಮತ್ತು ಆಪ್ತಸಮಾಲೋಚಕಿಯಾಗಿರುವ ಇವರು ದಾಂಪತ್ಯಚಿಕಿತ್ಸೆ ಮತ್ತು ಲೈಂಗಿಕ ಮನೋಚಿಕಿತ್ಸೆಯಲ್ಲಿ ಪರಿಣಿತಿ ಹೊಂದಿದವರು. ಕೃತಿಗಳು: ಏ ಬೀಳ್ತೀಯಾ ಹುಷಾರು! (ಪೋಷಕರ ಮಕ್ಕಳ ಸಂಬಂಧದ ಕುರಿತಾಗಿ, ಭೂಮಿ ಬುಕ್ಸ್‌ ಬೆಂಗಳೂರು), ನೀವು ನಿಜಕ್ಕೂ ಸುಖವಾಗಿದ್ದೀರಾ? (ವಿವಿಧ ಪತ್ರಿಕೆಗಳಲ್ಲಿ ಬರೆದ 39 ಲೇಖನಗಳ ಸಂಗ್ರಹ. ಗೀತಾಂಜಲಿ ಪುಸ್ತಕ ಪ್ರಕಾಶನ, ಶಿವಮೊಗ್ಗ.), ನಮ್ಮೊಳಗಿನ ಭಾವಪ್ರಪಂಚ (ನಮ್ಮ ಅಂತರಂಗದ ಜಗತ್ತಿನ ಸೂಕ್ಷ್ಮ ಪರಿಚಯ., ಕರ್ನಾಟಕ ಸಂಘ ಶಿವಮೊಗ್ಗ ಇವರ ...

READ MORE

Related Books