ಕವಿ ಬಾಗೂರು ಮಾರ್ಕಾಂಡೇಯ ಅವರು ಮಕ್ಕಳಿಗಾಗಿ ಬರೆದ ಕವನ ಸಂಕಲನ-ಚುಕುಬುಕು ರೈಲು. ನಾಲ್ಕು ವರ್ಣಗಳಲ್ಲಿ ಮುದ್ರಣವಾಗಿದ್ದು, ಅತ್ಯಾಕರ್ಷಕ ಚಿತ್ರವಿನ್ಯಾಸವನ್ನು ಒಳಗೊಂಡಿದೆ. ಈ ಕೃತಿಗೆ ಗೊರೂರು ಸಾಹಿತ್ಯ ಪ್ರಶಸ್ತಿ, ಮತ್ತು ಕಾವ್ಯಸಿಂಧು ಪುರಸ್ಕಾರವು ಲಭಿಸಿದೆ. ಸಂಕಲನದ ಬಹುತೇಕ ಪದ್ಯಗಳು ಮಕ್ಕಳಿಗೆ ಹಾಡುಗಳಾಗಿಸಿದ್ದಾರೆ. ಜಿ ವಿ ಅತ್ರಿ, ಅರ್ಚನಾ ಉಡುಪ ಹಾಗೂ ಎಂ ಡಿ ಪಲ್ಲವಿ ಅವರು. ಮಕ್ಕಳ ಮನಸ್ಸಿಗೂ ಮುದ ನೀಡಿ, ಅವರು ಗುನುಗುನಿಸುವಂತಾಗಿದೆ. ಇನ್ನೇನು ಬೇಕು ಕೃತಿಯ ಸಾರ್ಥಕತೆಗೆ, ಕವಿಯ ಧನ್ಯತಾಭಾವಕ್ಕೆ!
©2025 Book Brahma Private Limited.