ತುಂಟನ ಪದಗಳು

Author : ವಿ.ಜಿ.ಭಟ್ಟ

Pages 46

₹ 8.00




Year of Publication: 1985
Published by: ರುಕ್ಮಿಣೀ ಪ್ರಕಾಶನ
Address: ಮುಂಬಯಿ- 400058

Synopsys

‘ತುಂಟನ ಪದಗಳು’ ಹಿರಿಯ ಕವಿ ವಿ.ಜಿ. ಭಟ್ಟ ಅವರು ಮಕ್ಕಳಿಗಾಗಿ ಬರೆದ ಕವನ ಸಂಕಲನ. ವಿ.ಜಿ. ಭಟ್ಟ ಅವರ ಕಾವ್ಯವು ಸಹಜವಾಗಿಯೇ ಚುಟುಕುಗಳ ರೂಪವನ್ನು ತಳೆದಿವೆ. ಇಲ್ಲಿಯ ಕಲ್ಪನಾ ವೈಚಿತ್ರ್ಯ, ವಿನೋದ, ಸಭ್ಯತೆ, ಇವೆಲ್ಲ ಗುಣಗಳು ಮಕ್ಕಳ ಮನೋವಿಕಾಸವನ್ನು ಆತ್ಮೀಯವಾಗಿ  ಆವರಿಸಿಕೊಳ್ಳುವಂತಿವೆ. 

About the Author

ವಿ.ಜಿ.ಭಟ್ಟ
(03 December 1923 - 06 April 1991)

ಕವಿ ವಿ.ಜಿ. ಭಟ್ಟ ಎಂತಲೇ ಪರಿಚಿತರಾಗಿರುವ ವಿಷ್ಣು ಗೋವಿಂದ ಭಟ್ಟ ಅವರು ಜನಿಸಿದ್ದು 1923 ಡಿಸೆಂಬರ್ 3ರಂದು. ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಕಡತೋಕಾ ಗ್ರಾಮ ಇವರ ಹುಟ್ಟೂರು. ಮುಂಬೈ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಹೈಸ್ಕೂಲ್‌ ಉಪಾಧ್ಯಾಯರಾಗಿ ಕೆಲಕಾಲ ಕೆಲಸ ಮಾಡಿ ನಂತರ ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.  ಇವರ ಕೃತಿಗಳೆಂದರೆ ಅರಣ್ಯರೋದನ, ಕಾವ್ಯವೇದನೆ, ತುಂಟನ ಪದಗಳು, ಕಿಷ್ಕಂಧೆ ಮತ್ತು ಆತ್ಮಗೀತೆ (ಕವನ ಸಂಕಲನಗಳು), ಪೆದ್ದಂ ಕತೆಗಳು ಮತ್ತು ದಿವಸ (ಕಥಾಸಂಕಲನಗಳು), ಸವಿನೆನಪು (ಇತರೆ) ಸಹ್ಯಾದ್ರಿ (ಜೀವನಚರಿತ್ರೆ), ಖಾದಿಗ್ರಾಮೋದ್ಯೋಗ ...

READ MORE

Related Books