'ಸಕ್ಕೆ ಮೂಟೇ... ಯಾರಿಗೇಕೂ...?” ಈ ಸಂಕಲನದ ಮೊದಲ ಕವಿತೆ ಶುರುವಾಗೋದು ಈ ಸಾಲಿನಿಂದಾನೇ, `ಸಕ್ಕೆ ಮೂಟೆ ಎಲ್ಲಿಗೂ ಬೇಕೂ, ಸತ್ರೆ ಮೂಟೆ ಎಲ್ಲಿಗೂ ಬೇಕೂ..' ಅಂತ ತಟಕ್ಕನೆ ಉತ್ತರ ಕೊಟ್ಟಿಡಬಹುದು. ಹಾಗೆಯೇ ಎಲ್ಲರಿಗೂ ಬೇಕಾಗೊ ಸಕ್ರೆ ಮೂಟೆ ಇಲ್ಲಿನ ಪುಟಗಳಲ್ಲೆಲ್ಲ ತುಂಬಿಕೊಂಡಿವೆ.
ಅಮ್ಮನ ಅಕ್ಕರೆಯೂ ಹಾಗೇ ಉಕ್ಕಿ ಹರಿದಿದೆ. ಪುಟಾಣಿಗಳ ಸಿಹಿ ಸಿಹಿ ಮಾತೂ ಹಾಗೇ ಚೆಲ್ಲುವರಿದಿದೆ. ತಾಯೊಡಲಿನ ವಾತ್ಸಲ್ಯದ ಲೋಕ ಈ ಹೊತ್ತಿಗೆ, ಆಡುಭಾಷೆಯ ಮಾತುಕತೆಯೇ ಇಲ್ಲೆಲ್ಲ ಕೇಳಿ ಬಂದರೂ ಗುಪ್ತಗಾಮಿನಿಯಾಗಿ ಹಾಡಿನ ಜುಳುಜುಳು ನಿನಾದ ಹರಿವಿದೆ ಇಲ್ಲಿ.
©2025 Book Brahma Private Limited.