"ಬೆಸುಗೆಯ ಬಂಧನದಲ್ಲಿ ಅರಳಿದೆ ಪ್ರೀತಿ ನಿನ್ನ ಸಾಂಗತ್ಯವು ಕಲಿಸಿದೆ ನನಗೆ ನೀತಿ" ಕವಿ ಇಲ್ಲಿ ಭಾವಕ್ಕೆ ಪ್ರಾಧಾನ್ಯತೆ ನೀಡಿ ಪ್ರೀತಿ ಮಾತ್ರ ಜಗತ್ತನ್ನು ಬಂಧನದಲ್ಲಿ ಕಟ್ಟಿ ಹಾಕುತ್ತದೆ ಎಂದಿದ್ದಾರೆ. ಹೆಣ್ಣಿನ ಸಾಂಗತ್ಯ ಮಾತ್ರ ನೀತಿ ಕಲಿಸುತ್ತದೆ ಎಂದು ಹೇಳಿದ್ದು ತುಂಬಾ ಮಾರ್ಮಿಕ. ಅಂತಹ ಶಕ್ತಿ ಹೆಣ್ಣಿಗೆ ಇದೆ ಎಂದು ಹೆಣ್ಣನ್ನು ಗೌರವಿಸುವ ಮನೋಭಾವ ಇಲ್ಲಿ ಕಾಣಬಹುದು. ಪ್ರಕೃತಿಗೆ ಸಮೀಪವಾಗಿ ನಿಲ್ಲುವ ಹೆಣ್ಣು ಯಾರಿಗೆ ತಾನೆ ಬೇಡ ಎಂಬ ಭಾವ ಈ ಗಜಲ್ ನಲ್ಲಿ ಹೆಪ್ಪುಗಟ್ಟಿದೆ. ಅದೇ ರೀತಿಯ ದನಿಯನ್ನು ಇಲ್ಲಿಯ ಅನೇಕ ಗಜಲ್ ಗಳಲ್ಲಿ ಕಾಣಬಹುದು. ಇವುಗಳಷ್ಟೆ ಅಲ್ಲದೆ ಲೋಕಾನುಭವವನ್ನು ಸುಲಭವಾಗಿ, ಸುಲಲಿತವಾಗಿ ಕಟ್ಟಿ ಕೊಡುವ ಕೆಲಸ ಈ ಗಜಲ್ ಸಂಕಲನ ಮಾಡಿದೆ. ಪ್ರೀತಿ, ಪ್ರೇಮ, ಅನುರಾಗದ ಗಜಲ್ ಗಳು ಹೆಚ್ಚಾಗಿ ಬಂದಿವೆ. ಮಾನವೀಯ ಮೌಲ್ಯಗಳ ಕುರಿತು ಜಿಜ್ಞಾಸೆಯೂ ಇದೆ. ಒಂದಕ್ಕಿಂತ ಒಂದು ಗಜಲ್ ಹೊಸತನದಿಂದ ಕೂಡಿ ಹೊಸ ಭಾವ ಹೊತ್ತು ಓದುಗನೆದುರಿಗೆ ಬಂದು ನಿಲ್ಲುತ್ತವೆ. ಓದಿದಂತಲ್ಲ ಪುನಃ ಪುನಃ ಕಾಡುತ್ತವೆ. ಭಾಷೆಯ ಶೈಲಿಯಿಂದಲೂ ಗಮನ ಸೆಳೆಯುವ ಗಜಲ್ ಗಳು ಕೂಡ ಇಲ್ಲಿವೆ.
©2025 Book Brahma Private Limited.