ಕವಿ ದೇವೇಂದ್ರ ಕಟ್ಟಿಮನಿ ಅವರ ಕ್ರೀಡಾ ಗಜಲ್ ಗಳ ಸಂಕಲನ-ಸುಣ್ಣದ ಸಾಲು. ರಾಷ್ಟ್ರೀಯ ಭಾವೈಕ್ಯತೆ, ದೇಶಭಕ್ತಿ, ಕ್ರೀಡಾ ಪ್ರೀತಿ, ದೈಹಿಕ ಶಿಕ್ಷಣದ ಒಲವು. ಆರೋಗ್ಯ ಶಿಕ್ಷಣ, ಮೌಲ್ಯಶಿಕ್ಷಣ, ಯೋಗ, ವ್ಯಾಯಾಮ, ಸಾಹಿತ್ಯ.ಪ್ರಕೃತಿ, ಸಮಾಜ ಸೇವೆಯ ತೀವ ಕಾಳಜಿಗಳಿರುವುದನ್ನು ಈ ಗಜಲ್ ರಚನೆಗಳು ನುಡಿಯುತ್ತವೆ. ಸಮಕಾಲಿನ ಸಾಮಾಜಿಕ ಪ್ರಜ್ಞೆಗಳು ಮಿಳಿತವಾಗಿವೆ.
'ದೈಹಿಕ ಶಿಕ್ಷಣ' ಎಂಬ ಮೊದಲ ಗಜಲ್ ಕವನದಿಂದ 'ಏನಿದು ಕ್ರೀಡೆ' ಎನ್ನುವ ಗಜಲ್' ವರೆಗೆ ಉತ್ತಮವಾಗಿ ರಚಿಸಿದ್ದು, ಅಂತಾರಾಷ್ಟ್ರೀಯ, ರಾಷ್ಟ್ರೀಯ, ಸ್ಥಳಿಯ ಹಾಗೂ ಗ್ರಾಮೀಣ ಕ್ರೀಡೆಗಳ ನಿಯಮಗಳು, ಉಪಯೋಗಗಳು ಮತ್ತು ಮಹತ್ವಗಳು ಅಲ್ಲದೆ ಕ್ರೀಡೆ ಮತ್ತು ವ್ಯಾಯಾಮಗಳಿಂದ ವ್ಯಕ್ತಿಯ ದೈಹಿಕ ಮತ್ತು ಬೌದ್ದಿಕ ಮಟ್ಟ ಬಲಪಡಿಸುತ್ತದೆ. ಗಜಲ್‌ಗಳ ಮೂಲಕ ಕ್ರೀಡಾಭಾವನೆಯ ಹೊಸ ಬಳ್ಳಿ ಹಬ್ಬಿಸುವ ಪ್ರಯತ್ನದೊಂದಿಗೆ ಕ್ರೀಡಾ ಜಾಗೃತಿ ಮೂಡಿಸಿದ್ದಾರೆ. ದ್ವಿಪದಿಗಳಲ್ಲಿ ರಚನೆಗೊಂಡ ಈ ಗಜಲ್‌ಗಳ ಸಾಲುಗಳಲ್ಲಿ ಏನೋ ಒಂದು ಹೊಸತನ, ಕ್ರೀಡಾ ಅನನ್ಯತೆ, ಕ್ರೀಡಾ ಸ್ಫೂರ್ತಿಯನ್ನು ತಂದು ಕೊಡುತ್ತವೆ. ಗಜಲ್ ಗಳಲ್ಲಿ ಆಟ,ಓಟಗಳ ಬಗೆ ಇವೆ. ವಿವಿಧ ಆಟೋಟಗಳನ್ನು ಗಝಲ್ ನ ಮೂಲಕವೇ ಪ್ರಸ್ತಾಪಿಸಿರುವುದು ಅನನ್ಯವಾಗಿದೆ.
©2024 Book Brahma Private Limited.