ಚಾಡಮಾರಿ ಶಹರಗಳು

Author : ಮಹಾಂತೇಶ ಗೋನಾಲ

₹ 200.00




Year of Publication: 2021
Published by: ಮಹಾಕವಿ ಲಕ್ಷ್ಮೀಶ ಪ್ರಕಾಶನ
Address: ಸುರಪುರ

Synopsys

‘ಚಾಡಮಾರಿ ಶಹರಗಳು’ ಕೃತಿಯು ಮಹಾಂತೇಶ ಗೋನಾಲ ಅವರ ಗಜಲ್ ಗಳ ಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಜೆ. ಅಗಸ್ಟಿನ್‌ ಸುರಪುರ ಅವರು, ‘ಮಹಾಂತೇಶರ ಕೃತಿಯ ಶೀರ್ಷಿಕೆಗಳೇ ಅವರ ಸ್ವಂತಿಕೆ ಮತ್ತು ವಿಚಾರ ವೈಖರಿಯನ್ನು ಸಾರುತ್ತವೆ. ತಮ್ಮ ವಿಶಿಷ್ಟವಾದ ವಾಚನ ಶೈಲಿ ಹಾಗೂ ಅದ್ಭುತವಾದ ಭಾವನೆಗಳ ಅಭಿವ್ಯಕ್ತಿಯಿಂದ ಸುರಪುರದ ಅನೇಕ ಮಹಫಿಲ್ ಗಳಲ್ಲಿ ತಮ್ಮ ಗಜಲ್‌ಗಳ ಬಗ್ಗೆ ಕುತೂಹಲ ಹುಟ್ಟಿಸಿ ವ್ಹಾ.. ವ್ಹಾ.. ಎನ್ನಿಸಿಕೊಂಡಿದ್ದಾರೆ. ಈಗ ತಮ್ಮ ಕೃತಿಯಲ್ಲಿ ಬದುಕಿನ ಎಲ್ಲ ಹಳವಂಡಗಳನ್ನು, ವೈಯಕ್ತಿಕ ಜೀವನದ ಎಲ್ಲ ತಳಮಳಗಳನ್ನು ಗಜಲ್ ರಸಕ್ಕಿಳಿಸಿ, ಸಾರಸ್ವತ ಲೋಕದ ಕದ ತೆರೆದು ಒಳ ಪ್ರವೇಶಿಸಿದ್ದಾರೆ ’ ಎಂದಿದ್ದಾರೆ.

About the Author

ಮಹಾಂತೇಶ ಗೋನಾಲ

ಮಹಾಂತೇಶ ಗೋನಾಲ ಅವರು ಮೂಲತಃ ಯಾದಗಿರಿಯ ಸುರಪುರ ತಾಲೂಕಿನ ದೇವರಗೋನಾಲದವರು. ಸದ್ಯ ಸರಕಾರಿ ಪ್ರೌಢಾಶಾಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೃತ್ತಿಯಿಂದ ಶಿಕ್ಷಕರಾದರೂ ಸಾಹಿತ್ಯದೆಡೆಗೆ ವಿಶೇಷ ಒಲವು ಇಟ್ಟುಕೊಂಡಿದ್ದಾರೆ. ಮೊದಲ ಪುಸ್ತಕ 'ದಣಿದ ಮೌನ'- ಈ ಪುಸ್ತಕ ಕರ್ನಾಟಕ ಸರಕಾರ ಯುವ ಬರಹಗಾರರ ಚೊಚ್ಚಲ ಕೃತಿಗಳಿಗೆ ನೀಡುವ 2020ನೇ ಸಾಲಿನ ಪ್ರೋತ್ಸಾಹ ಧನವನ್ನು ಪಡೆದಿದೆ. ಕೃತಿಗಳು: ದಣಿದ ಮೌನ(ಗಜಲ್ ಸಂಕಲನ), 'ಚಾಡಮಾರಿ ಶಹರಗಳು(ಗಜಲ್ ಸಂಕಲನ). ...

READ MORE

Related Books