ಲೇಖಕ ದೊಡ್ಡಕಲ್ಲಹಳ್ಳಿ ನಾರಾಯಣಪ್ಪ ಅವರ ಗಜಲ್ನ ಸಂಕಲನ-ಕಲ್ಲಳ್ಳಿ ಗಜಲ್. ಒಟ್ಟು 40 ಗಜಲ್ ಗಳಿವೆ. ಪ್ರತೀ ಗಜಲ್ ಗೂ ರಮೇಶ್ ಅಗ್ರಹಾರ ಅವರು ಬಿಡಿಸಿದ ಚಿತ್ರಗಳಿವೆ. ಇಲ್ಲಿಯ ಗಜಲ್ ಗಳಲ್ಲಿ ಸಾಮಾಜಿಕ ತಲ್ಲಣಗಳು, ರಾಜಕೀಯ ಅರಾಜಕತೆಗಳು ನೋವು-ನಲಿವು , ನಿಟ್ಟುಸಿರು ಮುಖ್ಯ ವಸ್ತುಗಳಾಗಿವೆ. ಗಜಲ್ ಗಳ ರಚನೆ ಚೌಕಟ್ಟಿಗಿಂತ ಭಾವಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿರುವುದು ಕಂಡು ಬರುತ್ತದೆ. ಭಾವ-ಅರ್ಥದ ದೃಷ್ಟಿಯಿಂದ ಇಲ್ಲಿಯ ಗಜಲ್ ಗಳು ಓದುಗರ ಗಮನ ಸೆಳೆಯುತ್ತವೆ.
©2024 Book Brahma Private Limited.