‘ಸಾಂಸ್ ಏ ಗಜಲ್’ ರೇಣುಕಾತಾಯಿ ಎಂ ಸಂತಬಾ ಅವರ ಗಜಲ್ ಸಂಕಲನವಾಗಿದೆ. ಇಲ್ಲಿ ನಿತ್ಯ ಬದುಕಿನಲ್ಲಿ ಕಂಡುಂಡ ಹತ್ತಾರು ಘಟನೆಗಳೇ ಕಾವ್ಯದ ವಸ್ತುವಾಗಿದೆ. ಅವ್ವ, ಅಪ್ಪ, ಗುರು, ಸತ್ಯಸಾಯಿ, ಪ್ರಿಯಕರ, ನಾಡಿನ ದಾರ್ಶನಿಕರು ಡಾ. ರೇಣುಕಾತಾಯಿವರ ಮಾತೃತ್ವದ ಹೃದಯದ ಬದುವಿನಲ್ಲಿ ವಿರಾಜಮಾನರಾಗಿದ್ದಾರೆ. ಸ್ನಿಗ್ಧ ಪ್ರೀತಿಯ ಸಿಂಚನ, ಪ್ರೇಮದ ನವಿರು ಭಾ, ಉನ್ಮಾದ, ಜೀವಪರ, ಕಾಳಜಿ ಒಂದೆಡೆಯಾದರೆ, ಮಹಿಳೆಯರಿಗಿರುವ ಸಮಾಜದ ಚೌಕಟ್ಟು ಅಗ್ನಿ ಪರೀಕ್ಷೆಗೆ ಒಳಗಾದ ಸೀತೆ. ಕಿಶನ್ ನನ್ನ ಧ್ಯಾನಿಸುವ ಮೀರಾ, ಮಲ್ಲಿಕಾರ್ಜುನನ್ನು ಅರಸುವ ಅಕ್ಕನಂತೆ ಪ್ರತಿಧ್ವನಿಸುತ್ತದೆ.
©2025 Book Brahma Private Limited.