ಈ ಜಗತ್ತಿನಲ್ಲಿ ಪ್ರೀತಿಯೇ ಎಲ್ಲಕ್ಕಿಂತ ಮುಖ್ಯವಾದದ್ದು. ಪ್ರೇಮದ ಹಸಿವು, ಅಮಲು, ಉಸಿರನ್ನು 'ಸುರೂರ್ ಗಜಲ್' ಎನ್ನುವ ಗಜಲ್ ಸಂಕಲನದಲ್ಲಿ ಕವಿ ಅಲ್ಲಾಗಿರಿರಾಜ್ ಕನಕಗಿರಿ ಸುಂದರವಾಗಿ ಚಿತ್ರಿಸಿದ್ದಾರೆ.ಪ್ರತಿ ಸಾಲಿನಲ್ಲೂ ಕವಿಯ ಪ್ರೇಮ ತೀವ್ರತೆ, ಮನುಷ್ಯ ಪ್ರೀತಿಗೆ ಕುರುಹುಗಳಿವೆ. ಪ್ರೀತಿಯ ಹಂಬಲಿಸುವ ಫಕೀರನಾಗಿ, ಪ್ರೇಮದ ಸಾಮ್ರಾಟನಾಗಿ ವಿಜೃಂಭಿಸುವ ದೃಶ್ಯ ರೂಪಕಗಳು ಓದುಗರಿಗೆ ರೋಮಾಂಚನ. 'ನನ್ನ ನಿನ್ನ ದೀರ್ಘ ಪಯಣವಿದು ಕಾಲುದಾರಿಯಲೂ ಜೋಡಿ ನೆರಳು ಒಂದಾಗಬೇಕು ಸಖ/ ಹೂ ನಗುವಿನಂತೆ ನಾ ನಿನ್ನ ತುರುಬ ಸುತ್ತ ನಿತ್ಯ ಜೀವದುಸಿರು ನವಿಲಾಗಿ ಕುಣಿಯಬೇಕು ಸಖಿ' ಎನ್ನುವುದು ನಲ್ಲನಲ್ಲೆಯರ ಸಲ್ಲಾಪವನ್ನು ವಿವರಿಸಿದ ಪರಿ.
©2024 Book Brahma Private Limited.