‘ನಸುಕಿನಲ್ಲಿ ಬಿರಿದ ಹೂಗಳು’ ಲೇಖಕಿ ಚೇತನಾ ಕುಂಬ್ಳೆ ಅವರ ಗಜಲ್ ಸಂಕಲನ. ಕಾವ್ಯ ಜಗತ್ತಿನಲ್ಲಿ ಗಜಲ್ ಗೆ ವಿಶಿಷ್ಟ ಸ್ಥಾನವಿದೆ. ಗಜಲ್ ಮೂಲತಃ ಉರ್ದು ಕಾವ್ಯದಿಂದ ಕನ್ನಡಕ್ಕೆ ಬಂದದ್ದು, ಗಜಲ್ ನ್ನು ಪ್ರೇಮ ಸಾಮ್ರಾಜ್ಞೆ ಎನ್ನುತ್ತಾರೆ. ಎಂದರೆ ಸ್ತ್ರೀಯರೊಡನೆ ಮಾತನಾಡುವುದು, ಸಂಭಾಷಿಸುವುದು, ಪ್ರೇಮ, ಮೋಹ, ಅನುರಾಗ ವ್ಯಕ್ತ ಪಡಿಸುವುದೇ ಇದರ ಅರ್ಥ. ಇಂತಹ ಕಾವ್ಯ ಪ್ರಕಾರವನ್ನು ಆಯ್ದುಕೊಂಡು ಚೇತನಾ ಕುಂಬ್ಳೆ ಅವರು ನವಿರಾದ ಅರ್ಥವನ್ನು ಹೊಮ್ಮಿಸುವ ಗಜಲ್ ಗಳನ್ನು ರಚಿಸಿದ್ದಾರೆ. ಇಲ್ಲಿನ ಗಜಲ್ ಗುಚ್ಛದಲ್ಲಿ ಸಖ-ಸಖಿಯರ ಮನದಾಳದ ಪಿಸುದನಿಗಳಿವೆ. ಅಪ್ಪ, ಅಮ್ಮ, ಗೆಳತಿ, ಗೆಳೆಯ, ಪ್ರೀತಿ ಪ್ರೇಮಗಳಿಂದ ತನು ಮನ ಅರಳಿದೆ. ಮೃದು ಮಧುರ ನೆನಪುಗಳಿಂದ ತುಂಬಿ ತುಳುಕಿವೆ. ಮನಸ್ಸಿನ ತಳಮಳ ಇನ್ನಷ್ಟು ಕಾಲ ಗಾಢ ಮೌನದಲ್ಲಿ ಮೀಯುವುದರಿಂದ ಇನ್ನೂ ಉತ್ತಮ ಗಜಲ್ ಗಳನ್ನು ಚೇತನಾ ಕುಂಬ್ಳೆ ಅವರಿಂದ ಅಪೇಕ್ಷಿಸಬಹುದಾಗಿದೆ.
©2024 Book Brahma Private Limited.