`ಬೇಗಂ ಗಜಲ್ ಗುಚ್ಛ’ ಹಮೀದಾ ಬೇಗಂ ದೇಸಾಯಿ ಅವರ ಗಜಲ್ ಸಂಕಲನವಾಗಿದೆ. ಪ್ರಸ್ತುತ ಗಜಲ್ ಸಂಕಲನದಲ್ಲಿ ಹೆಣ್ಣು ಗಂಡಿನ ನಡುವಿನ ಪ್ರೀತಿ, ಪ್ರೇಮ ಪ್ರಣಯ, ಕನ ವರಿಕೆ, ನಿರೀಕ್ಷೆ, ಕನಸಿನ ಲೋಕ, ವಿರಹ ದಂತಹ ಸ್ಥಾಯಿ ಭಾವಗಳ ನ್ನು ಅಭಿವ್ಯಕ್ತಿಸುವ, ದೈವೀ ಭಕ್ತಿ, ಮಹಾನುಭಾವಿಗಳ ಸಾಧನೆ, ಸಾಮಾಜಿಕ ವ್ಯವಸ್ಥೆಯ ಓರೆ ಕೋರೆಗಳನ್ನು ಬಿಂಬಿಸುವ, ಸ್ತ್ರೀ ಸಂವೇದನೆ, ಶೋಷಣೆ ಗೆ ಶಾಬ್ದಿಕ ಅಭಿವ್ಯಕ್ತಿ ನೀಡುವ, ನಿಸರ್ಗ ಸೌಂದರ್ಯಕ್ಕೆ ಸ್ಪಂದಿಸಿದ ಪ್ರೇಮಿಗಳ ನಲಿವಿನ, ಒಲವಿನ ಉದ್ಗಾರಗಳಿವೆ .
©2025 Book Brahma Private Limited.