ಇದು ಪ್ರೇಮ ಮಹಲ್‌

Author : ಸಿದ್ಧರಾಮ ಹೊನ್ಕಲ್

Pages 135

₹ 125.00




Year of Publication: 2024
Published by: ಸಪ್ನ ಬುಕ್ ಹೌಸ್
Address: ಆರ್ ಒ#11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು - 560 009
Phone: 080-40114455

Synopsys

`ಇದು ಪ್ರೇಮ ಮಹಲ್‌’ ಕೃತಿಯು ಸಿದ್ಧರಾಮ ಹೊನ್ಕಲ್‌ ಅವರ ಪ್ರೇಮೋನ್ಮಾದದ ಆಯ್ದ ನೂರಾರು ಗಜಲ್‌ಗಳ ಸಂಕಲನವಾಗಿದ್ದು, ಅವರ ಗಜಲ್‌ ಕೃತಿಯ ದೃಷ್ಟಿಯಿಂದ ಆರನೇ ಕೃತಿಯಾಗಿದೆ. ಪ್ರೀತಿಯ ಜಾಡಲಿ ನಡೆಯುವ ಮನಸಿನ ಕ್ರಿಯೆಯಾಗಿ ನಡೆಸಿ ಅಪಾರ ಪ್ರೇಮ ವಿರಹ ಮತ್ತು ವೇದನಾಮಯ ಆಲಾಪನೆಯನ್ನು ಬಹು ಸುಂದರವಾಗಿ ಇಲ್ಲಿ ಅಭಿವ್ಯಕ್ತಿಸಿದ್ದಾರೆ. ಇಲ್ಲಿರುವ ಎಲ್ಲಾ ಗಜಲ್‌ಗಳು ಓದುಗನನ್ನು ಮತ್ತೆ ಮತ್ತೆ ಕಾಡುತ್ತದೆ.

About the Author

ಸಿದ್ಧರಾಮ ಹೊನ್ಕಲ್
(22 December 1960)

ಸೃಜನಶಿಲತೆಯ ಬಹುಮುಖಿ ಆಯಾಮಗಳಲ್ಲಿ ತೊಡಗಿಸಿಕೊಂಡಿರುವ ಕವಿ ಸಿದ್ಧರಾಮ ಹೊನ್ಕಲ್ ಅವರು ಯಾದಗಿರಿ ಜಿಲ್ಲೆಯ, ಶಹಾಪುರ ತಾಲೂಕಿನ ಸಗರ ಗ್ರಾಮದವರು.  ಎಂ ಎ., (ಎಲ್.ಎಲ್.ಬಿ ), ಡಿ.ಎನ್.ಹೆಚ್.ಇ , ಪಿ ಜಿ.ಡಿಎಮ್.ಸಿ.ಜೆ ಪದವೀಧರರು. ಕಥೆ, ಕಾವ್ಯ, ಹನಿಗವನ, ಲಲಿತ ಪ್ರಬಂಧ, ಪ್ರವಾಸ ಕಥನ, ವ್ಯಕ್ತಿ ಚಿತ್ರಣ, ಸಂಪಾದನೆ - ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳ 40 ಕೃತಿಗಳನ್ನು ರಚಿಸಿದ್ದಾರೆ. ಆರೋಗ್ಯ ಶಿಕ್ಷಣಾಧಿಕಾರಿಯಾಗಿ ನಿವೃತ್ತರು.  ಕೃತಿಗಳು: ಕಥೆ ಕೇಳು ಗೆಳೆಯ, ಬಯಲು ಬಿತ್ತನೆ, ನೆಲದ ಮರೆಯ ನಿನಾದ, ಅಂತರಂಗದ ಹನಿಗಳು, ಹೊಸ ಹಾಡು, ಬೆವರು, ನೆಲದ ನುಡಿ, ಗಾಂಧಿಯ ನಾಡಿನಲ್ಲಿ, ಪಂಚನಾದಿಗಳ ನಾಡಿನಲ್ಲಿ ಮುಂತಾದವು. ...

READ MORE

Related Books