‘ಹಸಿ ನೆಲದ ಹಾಡು’ ನಾಗೇಶ್ ಜೆ. ನಾಯಕ ಅವರ ಗಜಲ್ ವಿಮರ್ಶಾ ಸಂಕಲನವಾಗಿದೆ. ಇದಕ್ಕೆ ಅಲ್ಲಾಗಿರಿರಾಜ್ ಕನಕಗಿರಿ ಅವರ ಬೆನ್ನುಡಿ ಬರಹವಿದೆ; ನಾಗೇಶ್ ಜೆ. ನಾಯಕ ಅವರ 'ಹಸಿ ನೆಲದ ಹಾಡು' ಈ ಕೃತಿ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಒಂದು ವಿಶೇಷವಾದ ಗಜಲ್ ವಿಮರ್ಶಾ ಸಂಕಲನ ಎಂದು ಹೇಳಲು ದಿಲ್ ಖುಷ್ ಆಗುತ್ತೆ. ಏಕೆಂದರೆ ಕನ್ನಡ ಗಜಲ್ ಸಾಹಿತ್ಯ ವಿಚಾರವಾಗಿ ಗಮನಿಸಿದರೆ ಇಲ್ಲಿಯ ತನಕ ಮೂವತ್ತಕ್ಕೂ ಹೆಚ್ಚು ಗಜಲ್ ಸಂಕಲನಗಳನ್ನು ಪರಿಚಯಿಸಿರುವ ಏಕೈಕ ಲೇಖಕ, ವಿಮರ್ಶಕ ಎಂದರೆ ಅದು ನಾಗೇಶ್ ಜೆ. ನಾಯಕ. ಇಂತಹ ವಿಶೇಷ ಬರಹಗಾರ, ಅಂಕಣಕಾರ, ಕವಿ ಹಾಗೆಯೇ ಶಿಕ್ಷಕರೂ ಆಗಿರುವ ನಾಯಕ ಅವರ ಸಾಕಷ್ಟು ಕೃತಿಗಳಲ್ಲಿ, ಐತಿಹಾಸಿಕವಾಗಿ ಜನರ ನಡುವೆ ಚರ್ಚೆಗೊಂಡು ಎಲ್ಲರ ಮನಸಿನಾಳದಲ್ಲಿ ಅಚ್ಚಳಿಯದೆ ಉಳಿದ 'ಗರೀಬನ ಜೋಳಿಗೆ' ಗಜಲ್ ಸಂಕಲನ ಅವರಲ್ಲಿರುವ ಗಜಲ್ ಪ್ರೀತಿಯ ಸಂಕೇತ ಕೂಡ ಹೌದು. ಈಗ ಕನ್ನಡ ಸಾಹಿತ್ಯ ಲೋಕದಲ್ಲಿ ಮತ್ತೊಂದು ಹೊಸ ದಾಖಲೆಗೆ ಸಾಕ್ಷಿಯಾಗಿರುವ ನಾಯಕ ಅವರ 'ಹಸಿ ನೆಲದ ಹಾಡು' ಗಜಲ್ ಸಾಹಿತ್ಯದ ಜಾಡಿನಲ್ಲಿ ಮತ್ತೊಂದು ಹೊಸ ಸಂಚಲನ ಉಂಟು ಮಾಡಲಿ.
©2025 Book Brahma Private Limited.