‘ಆಕಾಶಕ್ಕೆ ಹಲವು ಬಣ್ಣಗಳು’ ಲೇಖಕ ಸಿದ್ದರಾಮ ಹೊನ್ಕಲ್ ಅವರ ಗಜಲ್ ಸಂಕಲನ. ಈ ಕೃತಿಗೆ ಲೇಖಕ ಚಿದಾನಂದ ಸಾಲಿ ಅವರು ಬೆನ್ನುಡಿ ಬರೆದಿದ್ದಾರೆ. ಕಲ್ಯಾಣ ಕರ್ನಾಟಕದ ಪ್ರಮುಖ ಕಥೆಗಾರರಲ್ಲಿ ಒಬ್ಬರಾದ ಸಿದ್ಧರಾಮ ಹೊನ್ಕಲ್ ಅವರು ಕಾವ್ಯ ಕೃತಿಗಳನ್ನು ಪ್ರಕಟಿಸಿದ್ದರೂ ಸಹ ಮುಖ್ಯವಾಗಿ ಪ್ರವಾಸ ಕಥನಕಾರರೇ. ತಮ್ಮ ಪಂಚನದಿಗಳ ನಾಡಿನಲ್ಲಿ ಎಂಬ ಪ್ರವಾಸ ಕಥನದ ಕೃತಿಗೆ 25-30 ವರ್ಷಗಳ ಹಿಂದೆ ಚಿಕ್ಕ ವಯಸ್ಸಿನಲ್ಲಿಯೇ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುರಸ್ಕಾರವನ್ನು ಪಡೆದ ಇವರು ಈಗ ಗಜಲ್ ಪ್ರಕಾರದತ್ತ ಕೈ ಚಾಚಿದ್ದಾರೆ. ಗದ್ಯ ಬರವಣಿಗೆಯಲ್ಲಿನ ಅವರ ಶೈಲಿಯ ಪ್ರಭಾವವು ಈ ಗಜಲ್ ಗಳ ಬರವಣಿಗೆ ಮೇಲೂ ಆಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ಪ್ರಶಂಸಿಸಿದ್ದಾರೆ.
ಸಾಮಾಜಿಕ ಸಂಕಟಗಳಿಗೆ ಮಿಡಿಯುವ ಕಥೆಗಾರ, ಮಧುರ ಮೈತ್ರಿಗಾಗಿ ಹಂಬಲಿಸುವ ಕವಿ, ಕೌಟುಂಬಿಕ ವಿಘಟನೆಗಳ ಬಗ್ಗೆ ವಿಹ್ವಲತೆ ವ್ಯಕ್ತಪಡಿಸುವ ಸಮಾಜ ಶಾಸ್ತ್ರಜ್ಞ, ಈ ಮೂವರೂ ಇಲ್ಲಿನ ಗಜಲ್ ಗಳನ್ನು ಕೈಹಿಡಿದು ಮುನ್ನಡೆಸಿದಂತಿದೆ.
©2024 Book Brahma Private Limited.