ಕವಿ, ಲೇಖಕ ಕಾಶೀನಾಥ ಅಂಬಲಗಿ ಅವರ ಗಜಲ್ ಸಂಕಲನ ‘ಸತಿಯೇ ಸಾಕಿಯಾದ ಕವಿಸಮಯ’. ಗಜಲ್‌ಗಳನ್ನು ಕೇಳಿಸಿಕೊಳ್ಳುವ ಈ ಹೊತ್ತಿನಲ್ಲಿ ಕಾಫಿಯಾ, ರದೀಫ್, ಮತ್ತಾ, ಹುಸ್ತೆ ಮತ್ತಾ .. ಇತ್ಯಾದಿ ಪರಿಭಾಷೆಗಳ ಗೊಡವೆಗೆ ಹೋಗುವುದು ಬೇಡವೆನ್ನಿಸುತ್ತದೆ.
ಯಾವುದನ್ನಾದರೂ, ಅದು ಸಾಕಿಯೋ, ಮಧುಶಾಲೆಯೋ, ಮದ್ಯವೋ, ಪ್ರೇಮವೋ, ಅನುಭಾವವೋ ಒಟ್ಟಿನಲ್ಲಿ ಲೌಕಿಕದ ಯಾವ ಉನ್ಮತ್ತತೆಯಾದರೂ ಸರಿಯೇ, ತೀವ್ರವಾಗಿ ಹಚ್ಚಿಕೊಂಡಾಕ್ಷಣ ಅದನ್ನು ವಿಸರ್ಜಿಸುವ ಒತ್ತಾಸೆಯೊಂದು ಮೊಳೆಯಬೇಕು. ಆಗ ಮಾತ್ರ ಅದು ನಿಜವಾಗಿ ಹಚ್ಚಿಕೊಂಡುದರ ಕುರುಹು. ಆಹ್ವಾನಿಸುವುದರ ಸುಖ ನಿಜವಾಗಿ ಅರಿವಿಗೆ ಬರುವುದು ಅದನ್ನು ಬಿಟ್ಟುಬಿಡುವುದರಲ್ಲಿ. ಹಾಗಾಗಿ, ಇದೊಂದು ಆಹ್ವಾನ-ವಿಸರ್ಜನೆಯ ಯಾನ ಎನ್ನಬಹುದು. ಲೌಕಿಕದ ಉತ್ತುಂಗವಾದ ಪಾರಲೌಕಿಕತೆಯ ಸ್ಪರ್ಶವೊಂದು ದೊರಕದೆ ಹೋದರೆ ಅದು ಗಜಲ್ ಆಗುವುದಾದರೂ ಹೇಗೆ? ಅಂತಹ ಪಾರಲೌಕಿಕ ಸ್ಪರ್ಶ ಇಲ್ಲಿಯ ಗಜಲ್ ಗಳಿಗೆ ಇದೆ.
©2024 Book Brahma Private Limited.