ಶ್ರೀದೇವಿ ಕೆರೆಮನೆ ಮತ್ತು ಗಿರೀಶ ಜಕಾಪುರೆ ಅವರ ಜುಗಲ್ ಬಂದಿ ’ನನ್ನ ದನಿಗೆ ನಿನ್ನ ದನಿಯು’. ಇಲ್ಲಿಯ ಗಜಲ್‌ಗಳು ದಟ್ಟತೆ ಮತ್ತು ರಚನಾ ವಿಧಾನದ ತಾದಾತ್ಯತೆಯಿಂದ ಕೂಡಿವೆ. ಗಾಢವಾಗಿ ಚಿತ್ರಿತವಾದ ಈ ಸಂಕಲನ ಬಹು ಅನನ್ಯತೆಯನ್ನು ಪಡೆದಿದೆ. ಹೆಣ್ಣು ಗಂಡಿನ ನಡುವೆ ಪ್ರೀತಿ ಪ್ರೇಮ, ಸಾಮರಸ್ಯ, ವಿರಹ, ಅನ್ನೋನ್ಯತೆ, ಗುಮಾನಿ, ಸಂಕಟ, ವ್ಯಥೆ ಇತ್ಯಾದಿ ಭಾವನಾತ್ಮಕ ಸಂಬಂಧಗಳ ನಡುವೆ; ಬಂಧನ ಮತ್ತು ಬಿಡುಗಡೆಯು ಆವರಿಸಿಕೊಂಡಿರುವ ಗಜಲ್‌ಗಳ ಒಟ್ಟು ಸ್ಥಾಯಿಭಾವ. ’ನಿನ್ನ ಇರುವಿಕೆ ಜಡದಲ್ಲಿಯೂ ಚೈತನ್ಯ ತುಂಬುತಿದೆ ಕಲ್ಲುಮುಳ್ಳು ಹೂವಾಗಿ ಅರಳಬಹುದು ನೀನು ಜೊತೆಗಿದ್ದರೆ’ ಎಂದು ಜಕಾಪುರೆ ಅವರು ಧ್ವನಿ ಎತ್ತಿದರೆ, ಶ್ರೀದೇವಿ ’ಬಿಟ್ಟು ಬಿಡು, ಮದಿರೆ ನಶೆ ಏರಿಸದಿದ್ದರೆ ಮತ್ತೆಂದೂ ಕುಡಿಯಬೇಡ ಬೆವರಿದ ಮೈ ಘಮದಲ್ಲೇ ನಶೆ ಏರಿಸಬಹುದು ನೀನು ಜೊತೆಗಿದ್ದರೆ’ ಎನ್ನುತ್ತಾರೆ.
ಈ ಕೃತಿಗೆ ಕ.ಸಾ.ಪ ಕೊಡಮಾಡುವ 2019ನೇ ಸಾಲಿನ ಶ್ರೀಮತಿ ಸುಮನ್ ಸೋಮಶೇಖರ್ ಸೋಮವಾರಪೇಟೆ ದತ್ತಿ ಪ್ರಶಸ್ತಿ ದೊರೆತಿದೆ.
©2024 Book Brahma Private Limited.