“ಮಧು ಬಟ್ಟಲಿನ ಗುಟುಕು” ದಸ್ತಗೀರಸಾಬ್ ದಿನ್ನಿ ಅವರ ಗಜಲ್ ಸಂಕಲನವಾಗಿದೆ. ಉತ್ತಮ ದರ್ಜೆಯ ಗಜಲ್ ಬರೆಯುವುದು, ಬಹುತೇಕ ಗಜಲ್ ಕವಿಗಳಿಗೆ ಸಾಧ್ಯವಾಗುವುದಿಲ್ಲ. ಈ ದಿಸೆಯಲ್ಲಿ, ದಸ್ತಗೀರ್ ದಿನ್ನಿಯವರ ನಮ್ಮ ಪ್ರಯತ್ನ ಸ್ವಾಗತಾರ್ಹ. ಇವರಿಗೆ ಭಾವಗೀತಾತ್ಮಕತೆ ಸಹಜವಾಗಿರುವುದರಿಂದ ಇಲ್ಲಿನ ಗಜಲ್‌ಗಳು ಓದುಗರೊಂದಿಗೆ, ಹೃದಯ ಸಂವಾದಕ್ಕೆ ತೊಡಗುತ್ತವೆ. ಗಜಲ್ ಪ್ರಕಾರದ ರಾಚನಿಕ ಚೌಕಟ್ಟನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನವನ್ನು ಮಾಡಿದ್ದಾರೆ. ಆದರೆ ಇವರ ಅಭಿವ್ಯಕ್ತಿ ವ್ಯಕ್ತಿಗತ ದರ್ದುಗಳಿಂದ ರೂಪಿತವಾಗದೆ; ಸಾಮಾಜಿಕ ತುರ್ತುಗಳಿಂದ ನಿಯಂತ್ರಿತವಾಗಿದೆ. ಇಷ್ಟಾದರೂ ಆಗಾಗ ಸ್ಮರಣೀಯವಾದ ಉಪಮೆಗಳನ್ನು ಸೃಜಿಸುವ ಶಕ್ತಿ ಇವರಿಗಿದೆ. ಈ ಸಂಕಲನ ಅವರ ಗಜಲ್ ಯಾನಕ್ಕೆ ಒಂದು ಶುಭಾರಂಭವಾಗಿದೆ. ಈ ಯಾನ ಮುಂದುವರೆದು ಇವರ ಗಜಲ್‌ಗಳಲ್ಲಿ ಇನ್ನೂ ಹೆಚ್ಚಿನ ತೀವ್ರತೆ ಮತ್ತು ನುಡಿಗಟ್ಟಿನ ಅಚ್ಚುಕಟ್ಟುತನವನ್ನು ಅವರ ಮುಂದಿನ ಸಂಕಲನಗಳಲ್ಲಿ ಕಾಣುವ ಭರವಸೆಯನ್ನು ಈ ಸಂಕಲನ ನಮಗೆ ನೀಡುತ್ತದೆ.
©2025 Book Brahma Private Limited.