ಶಾಂತರಸರ ತರುವಾಯ ಕನ್ನಡ ಗಜ಼ಲ್ ಪರಂಪರೆ ತೀರ ನಿಧಾನಗತಿಯಲ್ಲಿ ಸಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಪುನಃ ಕನ್ನಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗಜ಼ಲ್ ರಚನೆಯಾಗುತ್ತಿವೆ ಹಾಗೂ ಗಜ಼ಲ್ ಸಂಕಲನಗಳು ಪ್ರಕಟವಾಗುತ್ತಿವೆ. ಆದರೆ ಗಜ಼ಲ್‌ನ ಎಲ್ಲ ನಿಯಮಗಳನ್ನು ಪಾಲಿಸಿರುವುದು ಬಲು ಅಪರೂಪ. ಮುಖ್ಯವಾಗಿ ಗಜ಼ಲ್ ಆಕೃತಿ, ಆಶಯ ಎರಡೂ ಅಂಶಗಳನ್ನು ಅವಲಂಭಿಸಿರುತ್ತದೆ. ಇವೆರಡನ್ನು ಪಾಲಿಸಿ ರಚಿಸಿದ ಗಜ಼ಲ್ ಕೃತಿಗಳ ಸರಣ ಯಲ್ಲಿ ಸಾವಿರ ಕಣ ನ ನವಿಲು ಎಂಬ ಕೃತಿಯೂ ಬರುತ್ತದೆ. ಇದುವರೆಗೂ ಬಂದಿರುವ ಗಜ಼ಲ್ ಕೃತಿಗಳಿಗಿಂತ ಇದು ಹಲವಾರು ಅಂಶಗಳಲ್ಲಿ ಭಿನ್ನವಾಗಿದೆ. ಇದು ಗಜ಼ಲ್‌ನ ಕಾಫಿಯಾನಾ ಪ್ರಕಾರಕ್ಕೆ ಸೇರಿದ ಕನ್ನಡದ ಮೊದಲ ಗಜ಼ಲ್ ಕೃತಿ. ಇಲ್ಲಿನ ಎಲ್ಲ ಗಜ಼ಲ್‌ಗಳು ಗೈರ್ ಮುರದ್ಧಫ್ ಮಾದರಿಯದ್ದು. ಅಲ್ಲದೆ ಇದು ಸಮಾನ ಮಾತ್ರೆಗಳನ್ವಯ ಬರೆದ ಕನ್ನಡದ ಮೊಟ್ಟ ಮೊದಲ ಗಜ಼ಲ್ ಕೃತಿಯಾಗಿದ್ದು ಅತ್ಯಂತ ಕಡಿಮೆ ಅಂದರೆ 6 ಹಾಗೂ ಅತಿಹೆಚ್ಚು 30 ಮಾತ್ರೆಗಳನ್ನು ಬಳಸಲಾಗಿದೆ. ಕನ್ನಡದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಶೇರ್‌ಗಳುಳ್ಳ ಸೆಹ್‌ಗಜ಼ಲ್ (51 ಗಜ಼ಲ್) ಕೂಡ ಇಲ್ಲಿದೆ. ಇಲ್ಲಿ ಕಾಫಿಯಾದ ನಿಯಮಗಳನ್ನು ತಿಳಿಸುವ ಒಂದು ಅಧ್ಯಾಯವೂ ಇದೆ. ಇಲ್ಲಿನ ರಚನೆಗಳು ಉರ್ದು ಗಜ಼ಲ್ ಕಾವ್ಯ ನೀಡುವಂತೆಯೇ ಚಮತ್ಕಾರಿಕ ಅರ್ಥ, ಪರಿಣಾಮವನ್ನು ನೀಡುತ್ತವೆ ಎಂದು ಹಿರಿಯ ಕವಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿಯವರು ಮುನ್ನುಡಿಯಲ್ಲಿ ಹೇಳಿದ್ದಾರೆ.
©2024 Book Brahma Private Limited.