ನೆರಳಿಗಂಟಿದ ನೆನಪು

Author : ಶಿವಕುಮಾರ ಮೋ ಕರನಂದಿ

Pages 80

₹ 99.00




Year of Publication: 2023
Published by: ಕರನಂದಿ ಪ್ರಕಾಶನ ಗುಳೇದಗುಡ್ಡ
Address: ಶಿವಕುಮಾರ ಮೋಹನ ಕರನಂದಿ, (ಶ್ರೀ ಶಿವಕೃಪಾ ರಂಗಮಂದಿರ)ವಾರ್ಡ್ ನಂ-1 ಐ ಬಿ ಹತ್ತಿರ ಗುಳೇದಗುಡ್ಡ-587203ಜಿ:ಬಾಗಲಕೋಟೆ, 
Phone: 8971022430

Synopsys

‘ನೆರಳಿಗಂಟಿದ ನೆನಪು’ ಶಿವಕುಮಾರ.ಮೋ.ಕರನಂದಿ ಅವರ ಗಜಲ್‌ಸಂಕಲನವಾಗಿದೆ. ಸಂಕಲನದಲ್ಲಿ ನಲವತ್ತೊಂಭತ್ತು ಗಜಲ್ ಗಳಿವೆ. ಮನ-ಮನಗಳ ನಡುವಿನ ಕಸಿವಿಸಿ ಇಲ್ಲಿಯ ಕಾವ್ಯದ ಧಾತು. ಪ್ರೀತಿ, ಕಾಡುವ ವಿರಹ, ಮಾತು ತಪ್ಪಿದ ಪ್ರೇಯಸಿ ಇವೆಲ್ಲ ತಾಕಲಾಟಗಳು ಇಲ್ಲಿನ ಗಜಲ್ ಗಳಾಗಿ ಅರಳಿವೆ. ಈಗೀಗ ಗಜಲ್ ಜನಪ್ರಿಯ ಕಾವ್ಯಪ್ರಕಾರ. ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಇದರ ಸುಗ್ಗಿಯೇ ನಡೆದಿದೆ. ಹೊಸ ಜನಾಂಗದ ಮನಸ್ಸನ್ನು ಸೂರೆಗೊಂಡ ಗಜಲ್ ಮುಖ್ಯವಾಗಿ ಯುವ ಮನಸ್ಸಿನ ಭಾವಲೋಕದ ಅನಾವರಣವಾಗಿದೆ.

About the Author

ಶಿವಕುಮಾರ ಮೋ ಕರನಂದಿ
(07 February 1991)

ಶಿವಕುಮಾರ ಮೋ ಕರನಂದಿ ಅವರು ಬಾಗಲಕೋಟೆ ಜಿಲ್ಲೆಯ ಕಾಕನೂರು ಬಳಿಯ ರಾಮದುರ್ಗದಲ್ಲಿ 07-02-1991 ರಂದು ಜನಿಸಿದರು. ತಂದೆ ದಿ. ರಾಚಪ್ಪ ಗು ಕರನಂದಿ.ರಂಗಶಿಲ್ಪಿಗಳಾಗಿದ್ದರು. ಶಿಕ್ಷಣವನ್ನು ಗುಳೇದಗುಡ್ಡ, ಬಾಗಲಕೋಟೆ ಯಲ್ಲಿ ಮಾಡಿ ಸಧ್ಯ ಇವರು ಗುಳೇದಗುಡ್ಡ ತಾಲೂಕಾ ಸಾರ್ವಜನಿಕ ಆಸ್ಪತ್ರೆ ಗುಳೇದಗುಡ್ಡದಲ್ಲಿ ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞರಾಗಿದ್ದಾರೆ. ಕವಿತೆ, ಭಾವಗೀತೆ,ಗಜಲ್, ಕಥೆ, ಲೇಖನ ಬರೆಯುತ್ತಾರೆ. ಇವರ ಚೊಚ್ಚಲ ಕೃತಿ 'ಮೌನ ಮಾತಾದಾಗ' ಕವನಸಂಕಲನ ವೂ ಕರ್ನಾಟಕ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರದ ಯುವ ಬರಹಗಾರರ ಯೋಜನೆಯಲ್ಲಿ ಆಯ್ಕೆಯಾಗಿದೆ.  ಸಲಾಂ ಏ ಗಾಲಿಬ್ ಎಂಬ ಗಜಲ್ ಸಂಪಾದಿತ ಕೃತಿ. ನಾಡಿನ ಒಟ್ಟು 41 ಗಜಲ್ ಕವಿಗಳ ಗಜಲ್ಗಳಿವೆ. ಇವರು ...

READ MORE

Related Books