ಬಿಸುಪಿನೆದೆಯ ಕನವರಿಕೆಗಳು

Author : ಸುಮನಾ ಆರ್ ಹೇರ್ಳೆ

Pages 136

₹ 95.00




Year of Publication: 2022
Published by: ಅರ್ಚನಾ ಪ್ರಕಾಶನ
Address: ಮಣೂರು,ಕೋಟ

Synopsys

ಲೇಖಕಿ ಸುಮನಾ ಆರ್ ಹೇರ್ಳೆ ಅವರ ಗಝಲ್ ಸಂಕಲನ ಬಿಸುಪಿನೆದೆಯ ಕನವರಿಕೆಗಳು. ಕೃತಿಗೆ ಈಶ್ವರ ಜಿ.ಸಂಪಗಾವಿ ಅವರು ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಮಧುರಾ ಮೂರ್ತಿ ಅವರು ಬೆನ್ನುಡಿಯನ್ನು ಬರೆದಿದ್ದು, ಸುಮನಾ ಅವರ ಎಲ್ಲ ಬರಹಗಳಲ್ಲಿ ಇವರ ಗಝಲ್ ಗಳು ವಿಶೇಷವಾಗಿ ಗಮನ ಸೆಳೆಯುವಂತದ್ದು. ಇವರು ಬರೆದ ಗಝಲ್ ಗಳು ಬರಿ ಪ್ರೇಮ ಕಾವ್ಯಗಳಾಗಿರದೆ ವಿರಹ, ವೇದನೆ, ಒಲವು, ನಲಿವು, ಲೌಕಿಕ, ಆಧ್ಯಾತ್ಮಿಕ ಹೀಗೆ ಎಲ್ಲ ಪ್ರಕಾರಗಳಲ್ಲೂ ವಿಷಯವನ್ನು ಓದುಗನ ಮನಮುಟ್ಟುವಂತೆ ಬರೆಯುವುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಅದಕ್ಕೆ ಸಾಕ್ಷಿಯೆಂಬಂತೆ ಲೋಕಾರ್ಪಣೆ ಮಾಡುತ್ತಿರುವ ಬಿಸುಪಿನೆದೆಯ ಕನವರಿಕೆಗಳು ಗಝಲ್ ಸಂಕಲನ. ಸುಮನಾ ಅವರ ಚೊಚ್ಚಲ ಬಿಸುಪಿನೆದೆಯ ಕನವರಿಕೆಗಳು ಗಝಲ್ ಸಂಕಲನವನ್ನು ತಾವೆಲ್ಲರೂ ಸಂತಸದಿಂದ ಕೊಂಡು ಓದಿ, ಹರಸಿ ಪ್ರೋತ್ಸಾಹಿಸಲು ವಿನಂತಿಸುವೆನು. ಇವರ ಬತ್ತಳಿಕೆಯಿಂದ ಇನ್ನಷ್ಟು ಉತ್ಕೃಷ್ಟ ಕೃತಿಗಳು ಹೊರಬಂದು ಕನ್ನಡ ಸಾರಸ್ವತಲೋಕಕ್ಕೆ ಸೇರ್ಪಡೆಯಾಗಲೆಂದು ಮನದುಂಬಿ ಶುಭವನ್ನು ಹಾರೈಸುವೆನು ಎಂಬುದಾಗಿ ಹೇಳಿದ್ದಾರೆ.

About the Author

ಸುಮನಾ ಆರ್ ಹೇರ್ಳೆ
(01 March 1971)

ಕವಯಿತ್ರಿ ಸುಮನಾ ಆರ್ ಹೇರ್ಳೆ  ಕುಂದಾಪುರದ ಕೋಟ ಮೂಲದವರು.ತಂದೆ ವೈದಿಕ ವಿದ್ವಾಂಸರು ಕೆ.ಶಂಕರನಾರಾಯಣ ಸೋಮಯಾಜಿ ಹಾಗೂ ತಾಯಿ ಸಾವಿತ್ರಿ . ಪತಿ ಪಿ ರವೀಂದ್ರ ಹೇರ್ಳೆ.  ಸಾಂಸಾರಿಕ ಜವಾಬ್ದಾರಿಯ ನಡುವೆಯೂ ಬರವಣಿಗೆ, ಯಕ್ಷಗಾನ, ತಾಳಮದ್ದಲೆ, ನಾಟಕ ಇಂಥದ್ದರಲ್ಲೆಲ್ಲ ತೊಡಗಿಸಿಕೊಂಡ ಸಕ್ರಿಯ ಬಹುಮುಖ ಪ್ರತಿಭೆ. ಕೃತಿಗಳು 1) ಬಿಸುಪಿನೆದೆಯ ಕನವರಿಕೆಗಳು ( ಗಝಲ್ ಸಂಕಲನ) 2) ಮುಕ್ತಕ ಸುಮ ಮಾಲೆ ( ಮುಕ್ತಕಗಳ ಸಂಕಲನ) ...

READ MORE

Related Books