ಲೇಖಕಿ ಎಚ್. ಎಸ್. ಮುಕ್ತಾಯಕ್ಕ ಅವರ ಕೃತಿ ‘ನಲವತ್ತೈದು ಗಜಲುಗಳು’.`ಈ ಬದುಕು ಬೇರೇನನ್ನು ಕೊಡದಿದ್ದರೂ ಕರುಣಿಸಿತು ಕವಿತೆಯನ್ನು ಎಲ್ಲಿಂದಲೋ ಬಂದ.ಅದನ್ನು ಮುತ್ತಿಟ್ಟು ಎದೆ ತುಂಬಿ ಹಾಡಿದೆನು’, ‘ಅದನು ಶೃಂಗರಿಸಿದೆನು ಕೊಳದ ತರಂಗಗಳಿಂದ ತಾರೆಯ ಬೆಳಕಿನಿಂದ ವಸಂತದ ಸೌಂದರ್ಯವನ್ನೂ ಮಿಂಚಿನ ಥಳಕನ್ನೂ ದೋಚಿದನು.’ ‘ ಮೊಗ್ಗುಗಳೆಲ್ಲವು ಯೌವ್ವನದ ಆನಂದವನ್ನು ತಿಳಿಸಿ ಹೇಳಿದವು ಆಕಾಶದ ಕಪ್ಪಿನಿಂದ ಆಗಸದ ಕವಿತೆಯನ್ನು ಮೂಡಿಸಿದೆನು.’ ‘ಸಾಗರದಾಳದಲಿ ಆಗಸದ ಏಕಾಕಿತನದಲಿ ಅದನ್ನು ಹುಡುಕುವ ಮರುಳುಗಾಡಿನ ಸ್ತಬ್ಧತೆ ಕಾನನದ ಹಸಿರಿನಿಂದ ಅವನು ರೂಪಿಸಿದೆನು’, ‘ಆಗಸದಾಚೆಗೂ ನಿಂತು ನಾನು ಎಲ್ಲವನ್ನೂ ನೋಡಬಲ್ಲವಳಾದೆ ಎಲ್ಲರ ಎದೆಯಾಳದ ಮಿಡಿತವನ್ನು ನಾನು ಕೇಳಬಲ್ಲವಳಾದೆನು’ ‘ಸೃಷ್ಟಿಯ ರಹಸ್ಯವನ್ನು ತೆಗೆದುಕೊಂಡು ಕವಿತೆಯನ್ನು ಕಡೆಯುತ್ತೇನೆ ನನ್ನೆದೆಯ ಮಿಡಿತದಿಂದ ಒಡಲಿನ ಉಸಿರಿನಿಂದ ಜೀವ ತುಂಬುವೆನು’ ಇಂತಹ ಸಾಲುಗಳನ್ನೊಳಗೊಂಡ ನಲವತ್ತು ಗಜಲುಗಳು ಈ ಕೃತಿಯಲ್ಲಿ ಸಂಕಲನಗೊಂಡಿವೆ.
©2024 Book Brahma Private Limited.