ಲೇಖಕ ಈರಣ್ಣ ಬೆಂಗಾಲಿ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರ-ಬದುಕು-ಸಾಧನೆ-ಸಾಮಾಜಿಕ ಚಿಂತನೆ-ಆಶಯ, ಹೋರಾಟ, ಪ್ರತಿಮೆ, ರೂಪಕಗಳು ಹೀಗೆ ಎಲ್ಲವನ್ನೂ ಗಜಲ್ ಗಳ ರೂಪದಲ್ಲಿ ನೀಡಿದ ಕೃತಿ-ಅರಿವಿನ ಅಂಬರ ಅಂಬೇಡ್ಕರ್. ಒಬ್ಬ ಮಹಾನ ಚಿಂತಕನ ಕುರಿತು ಒಂದು ಗಜಲ್ ಬರೆಯಬಹುದು. ಆದರೆ, ಇಡೀ ಸಂಕಲನವನ್ನು ಈ ಉದ್ದೇಶ ಸಾಧನೆಗೆ ಮೀಸಲಿಟ್ಟಿದ್ದು ಮಾತ್ರ ಈ ಕೃತಿಯ ಹೆಗ್ಗಳಿಕೆ.
50 ಗಜಲ್ ಗಳಿರುವ ಸಂಕಲನದಲ್ಲಿ ಪ್ರತಿ ಗಜಲ್ ಗೂ ಸುಂದರ ಚಿತ್ರಗಳ ಮೆರೆಗು ನೀಡಿರುವುದು ಕೃತಿಯ ಅರ್ಥವಂತಿಕೆಯಿಂದಲೂ ಮಹತ್ವ ಪಡೆದಿದೆ. ಆರಂಭದ ಪುಟಗಳಲ್ಲಿ ಡಾ. ಬಿ.ಆರ್. ಅಂಭೇಡ್ಕರ ಅವರು ರಚಿಸಿದ ಭಾರತದ ಸಂವಿಧಾನ ಕುರಿತ ಮಾಹಿತಿ ಮತ್ತು ಕೊನೆಯ ಪುಟಗಳಲ್ಲಿ ಶೊಷಣೆಯ ಕುರಿತು ಅಂಬೇಡ್ಕರ್ ಅವರ ಚಿಂತನೆ, ಹೋರಾಟದ ಆಶಯ ಇತ್ಯಾದಿಗಳನ್ನು ಒಳಗೊಂಡಿರುವ ವಿವಿಧ ಪತ್ರಿಕೆಗಳ ವರದಿಗಳನ್ನು ಸಂಕಲಿಸಿದೆ.
©2024 Book Brahma Private Limited.