ಲೇಖಕಿ ಎಚ್. ಎಸ್. ಮುಕ್ತಾಯಕ್ಕ ಅವರ ಕೃತಿ ‘ಮೂವತ್ತೈದು ಗಜ಼ಲುಗಳು’. `ಸದಾ ಜನರ ಕೆಂಗಣ್ಣಿಗೆ ಕಣ್ಗಾವಲಿಗೆ ಬೆನ್ನು ತಿರುಗಿಸಿ ನಡೆದ ಯಾರ ಅಂಕೆಗೂ ಅಳತೆಗೂ ಸಿಗದ ದೂರ ಕ್ಷಿತಿಜದಂತೆ ನಾನು’, `ಮಧುಶಾಲೆಯಲ್ಲಿ ಬಟ್ಟಲುಗಳ ಮಾತಾಡಿಲ್ಲ ಕಂಬನಿ ತುಳುಕಿಲ್ಲ ಈಗ ತಾನೆ ಸ್ವಸ್ತಿ ಹೇಳಿದೆಯಲ್ಲ ಆಗಲೆ ಹೋಗುವೆಯೆನ್ನುವಿಯಲ್ಲ’, `ಹೇಗಾಗಿ ಹೋಗಿದೆ ಇಂದು ಈ ನನ್ನ ದೇಶ ಸೂರ್ಯನನ್ನು ಹೂತಿಟ್ಟಂಥ ಈ ನನ್ನ ದೇಶ’, ‘ಇಷ್ಟಾದರೂ ನನ್ನ ಎದೆಯ ಪಾತ್ರ ಬರಿದಾಗಲೇ ಇಲ್ಲ ಆಳದಿಂದ ಕವಿತೆಯ ಕಿಂಕಿಣಿ ಕೇಳಿ ಬಂತು ನಾನು ನಗಲು’, ‘ಬೆಡಗಿನ ಸಂಜೆ ಇಳೆಗೆ ಇಳಿದಿದೆ ಆದರೂ ನೀನಿನ್ನು ಬರಲಿಲ್ಲ ಇರುಳು ನಕ್ಷತ್ರಗಳ ಮುಡಿಸಿದ ಆದರೂ ನೀನಿನ್ನು ಬರಲಿಲ್ಲ’, ‘ಕೂಡಿ ಆಡಿದವರೆಲ್ಲ ಒಂದು ದಿನ ಅಗಲಲೇಬೇಕು ಲೋಕದ ನಿಯಮವೇ ಹಾಗೆ ಒಂದು ದಿನ ಹೋಗಲೇಬೇಕು’, ‘ಮುಗ್ಧ ಹಸುಳೆಗಳಿಗೆ ಈ ಜಗವ ಬಿಟ್ಟುಕೊಡಲೇಬೇಕು ಆಗ ಎಲ್ಲ ಸುಖ ಶಾಂತಿಯಲಿರುವಾಗ ನಾನಿರುವೆನೋ ಇಲ್ಲವೊ’, ‘ಎಂದೆಂದಿಗೂ ಸೂರ್ಯ ಮುಳುಗಬಾರದೆನ್ನುವ ಹಂಬಲವು ನಮಗೆ ರವಿಯ ಕೆಂಬಣ್ಣವು ನನ್ನ ತಿಲಕದೊಡನೆ ಚಿನ್ನಾಟವಾಡುತಿದೆ’.ಇಂತಹ ಸಾಲುಗಳನ್ನೊಳಗೊಳಗಂಡ ಮೂವತ್ತೈದು ಗಜಲುಗಳು ಈ ಕೃತಿಯಲ್ಲಿ ಸಂಕಲನಗೊಂಡಿವೆ.
©2024 Book Brahma Private Limited.